ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಮಕೃಷ್ಣ ಬಾಳಿಗ ಹೆಸರಿನಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಮನವಿ: ಹರಿಕೃಷ್ಣ ಬಂಟ್ವಾಳ ಹೇಳಿಕೆ

ಮಂಗಳೂರು: ಬೆಂಗಳೂರಿನ‌ ಎಲೆಕ್ಟ್ರಾನಿಕ್ ಸಿಟಿ ಕಟ್ಟಿದ್ದೇ ರಾಮಕೃಷ್ಣ ಬಾಳಿಗ. RK ಬಾಳಿಗ ಅವರು 'ಫಾದರ್ ಆಫ್ ಎಲೆಕ್ಟ್ರಾನಿಕ್ ಸಿಟಿ'‌ ಎಂದುಮಂಗಳೂರಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.

ಕಿಯೋನಿಕ್ಸ್ ಮೊದಲ ಅಧ್ಯಕ್ಷರಾಗಿ ಅವರು 'ಎಲೆಕ್ಟ್ರಾನಿಕ್ ಸಿಟಿ' ಹುಟ್ಟು ಹಾಕಿದ್ದರು. ಅಂತಹ ಬಾಳಿಗರವರ ಗೌರವಿಸುವ ಕೆಲಸ ಆಗಬೇಕಿದೆ. ದಕ್ಷಿಣ ಕನ್ನಡ ಜಿಲ್ಲೆಯವರಾದ ಅವರನ್ನ ಗುರುತಿಸುವ ಕೆಲಸ ಆಗಿಲ್ಲ.

ಮಂಗಳೂರಿನ ಅವರ ಹೆಸರಿನಲ್ಲಿ ಐಟಿ ಪಾರ್ಕ್ ನಿರ್ಮಾಣಕ್ಕೆ ಮನವಿ ಮಾಡಿದ್ದೇನೆ. ಈಗಾಗಲೇ ಐಟಿ ಬಿಟಿ ಸಚಿವ, ಸಂಸದರಿಗೆ ಮನವಿ ಸಲ್ಲಿಸಿದ್ದೇನೆ. ಸಿಎಂಗೂ ಈ ಕುರಿತು ಮಾತನಾಡಲಿದ್ದೇನೆ.

ಇದರಿಂದ ಕರಾವಳಿಯ ನಿರುದ್ಯೋಗಕ್ಕೂ ಪರಿಹಾರವಾದೀತು. ಐಟಿ ಪಾರ್ಕ್ ಇಸ್ರೇಲ್ ಮಾದರಿಯಲ್ಲಿ ಮಾಡುವ ಉದ್ದೇಶ ಹೊಂದಿದ್ದೇವೆ. ಅದಕ್ಕಾಗಿಯೇ ದೇರೆಬೈಲ್ ನಲ್ಲಿ ಜಾಗ ಗುರುತಿಸಿದ್ದೇನೆ ಅಂದರು.

Edited By : Manjunath H D
Kshetra Samachara

Kshetra Samachara

28/12/2020 04:54 pm

Cinque Terre

20.28 K

Cinque Terre

6