ಉಡುಪಿ: ನಗರದ ಬೋರ್ಡು ಹೈಸ್ಕೂಲ್ ಕಂಪೌಂಡ್ ಪ್ರವೇಶದ್ವಾರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅಪರಿಚಿತ ವೃದ್ಧರನ್ನು,
ಪೌರಕಾರ್ಮಿಕರ ಸಹಕಾರದಿಂದ ಸಹೃದಯಿ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದರಾದರೂ ಅದಾಗಲೇ ವೃದ್ಧರು ಮೃತ ಪಟ್ಟಿರುವುದನ್ನು ವೈದ್ಯರು ದೃಢೀಕರಿಸಿದರು.
ಶವವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿ ಇಡಲಾಗಿದೆ. ವೃದ್ಧರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ವಾರೀಸುದಾರರು ಇದ್ದಲ್ಲಿ ತುರ್ತಾಗಿ ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.
Kshetra Samachara
28/12/2020 04:16 pm