ಉದ್ಯಾವರ: ಜಿಲ್ಲೆಯ ಉದ್ಯಾವರದಿಂದ ಹೊರಟಿದ್ದ ಅಯ್ಯಪ್ಪ ಮಾಲಾಧಾರಿಯೊಬ್ವರು ಶಬರಿಮಲೆಯಲ್ಲಿ ಹೃದಯಾಘಾತಕ್ಲೀಡಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಸುರೇಶ್ ಬಂಗೇರ ( 52) ಹೃದಯಾಘಾತಕ್ಕೀಡಾದವರು.ಉದ್ಯಾವರ ಸಂಪಿಗೆನಗರದಲ್ಲಿ ಇವರು ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು.
ಉದ್ಯಾವರದ ಅಯ್ಯಪ್ಪ ಮಂದಿರದಿಂದ 32 ಸ್ವಾಮಿಗಳ ಜೊತೆ ಹೊರಟ ಸುರೇಶ್ ಬಂಗೇರ, ಮಹಾಪೂಜೆ ಮಾಡಿ ಇರುಮುಡಿ ಕಟ್ಟಿ ನಿನ್ನೆ ರೈಲು ಮುಖಾಂತರ ಹೊರಟಿದ್ದರು.ದಾರಿ ಮಧ್ಯೆ ಹೃದಯಾಘಾತಕ್ಕೀಡಾಗಿ ಮೃತರಾಗಿದ್ದಾರೆ.ಮೃತರು, ಪತ್ನಿ ,ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.
Kshetra Samachara
16/01/2022 06:16 pm