ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಜಗಮಗಿಸೋ ವಿದ್ಯುತ್ ದೀಪಾಲಂಕಾರದಿಂದ ಮಿನುಗುತ್ತಿದೆ ಮಂಗಳೂರು - ಇದು ದಸರಾ ವಿಶೇಷ

ಮಂಗಳೂರು: ರಾತ್ರಿವೇಳೆ ಮಂಗಳೂರು ನಗರದ ಎಲ್ಲಿಗೆ ಹೋದರೂ ಬೆಳಕಿನ ಚಿತ್ತಾರ. ರಸ್ತೆರಸ್ತೆ, ಬೀದಿಬೀದಿಗಳಲ್ಲೂ ವಿದ್ಯುತ್ ದೀಪಗಳು ರಂಗು ಮಿನುಗುತ್ತಿದೆ. ನಗರದ ಸುಮಾರು 7 ಕಿ.ಮೀ. ಉದ್ದಕ್ಕೆ ಬರೋಬ್ಬರಿ 22ಲಕ್ಷಕ್ಕೂ ಅಧಿಕ ಬಲ್ಬ್‌ಗಳು ಪ್ರಕಾಶಮಾನವಾಗಿ ಬೆಳಗುತ್ತಿದೆ.

ಹೌದು.. ದಸರಾ ಎಂದರೆ ಹಿಂದೆ ನೆನಪಾಗುದೇ ಮೈಸೂರು ದಸರಾ. ಆದರೆ ಈಗ ಹಾಗಲ್ಲ, ಮಂಗಳೂರು ದಸರಾ ರಾಜ್ಯ, ರಾಷ್ಟ್ರವನ್ನು ಮೀರಿ ಅಂತರಾಷ್ಟ್ರೀಯ ಮಟ್ಟದಲ್ಲೂ ಪ್ರಖ್ಯಾತಿ ಪಡೆದಿದೆ. ದಸರಾ ಇಷ್ಟರ ಮಟ್ಟಿಗೆ ಖ್ಯಾತಿಗಳಿಸಲು ವಿದ್ಯುತ್ ದೀಪಗಳ ವರ್ಣಮಯ ಶೃಂಗಾರವೂ ಒಂದುಮಟ್ಟಿಗೆ ಕಾರಣ. ಮಂಗಳೂರು ದಸರಾ ನಡೆಯುತ್ತಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ ಸಂಜೆಯಾಗುತ್ತಿದ್ದಂತೆ ಭೂಲೋಕದ ಸ್ವರ್ಗದಂತೆ ಕಂಗೊಳಿಸುತ್ತದೆ. ದಸರಾ ಮೆರವಣಿಗೆ ಹಾದುಹೋಗುವ ನಗರದ ಸುಮಾರು 7ಕಿ.ಮೀ. ರಸ್ತೆಯುದ್ದಕ್ಕೂ ಮಂಗಳೂರು ಮನಪಾ ವತಿಯಿಂದ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಈ ಬಾರಿಯ ದಸರಾಕ್ಕೆ 10ಲಕ್ಷ ದೊಡ್ಡ ಪ್ರಮಾಣದ ಬಲ್ಬ್‌ಗಳು ಸೇರಿದಂತೆ ಒಟ್ಟು 22ಲಕ್ಷಕ್ಕೂ ಅಧಿಕ ಬಲ್ಬ್‌ಗಳಿಂದ ಶೃಂಗರಿಸಲಾಗಿದೆ.

ದಸರಾ ಹಿನ್ನೆಲೆಯಲ್ಲಿ ನವರಾತ್ರಿ ಆರಂಭಗೊಂಡ ದಿನದಿಂದ 10ದಿನಗಳ ಕಾಲ ಸಂಜೆ 7ಗಂಟೆಯಾಗುತ್ತಿದ್ದಂತೆ ನಗರದೆಲ್ಲೆಲ್ಲಾ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತದೆ. ಸದಾ ಜನಜಂಗುಳಿ ವಾಹನಗಳಿಂದ ತುಂಬಿರುವ ನಗರದ ರಸ್ತೆಗಳೆಲ್ಲಾ ಈ ಸಂದರ್ಭದಲ್ಲಿ ಬೆಳಕಿನ ಚಿತ್ತಾರದಿಂದ ಮಧುವಣಗಿತ್ತಿಯಂತೆ ಅಲಂಕೃತವಾಗುತ್ತದೆ. ಇದನ್ನೆಲ್ಲಾ ಕಣ್ತುಂಬುಬೇಕಾದರೆ ನೀವು ಮಂಗಳೂರಿಗೆ ಬರಬೇಕಷ್ಟೆ.

Edited By : Nagesh Gaonkar
PublicNext

PublicNext

03/10/2024 10:48 pm

Cinque Terre

35.75 K

Cinque Terre

0