ಬಜಪೆ:ಕಟೀಲು - ಬಜಪೆ ರಾಜ್ಯ ಹೆದ್ದಾರಿಯ ಎಕ್ಕಾರು ದುರ್ಗಾನಗರದಿಂದ ಹುಣ್ಸೆಕಟ್ಟೆ ತನಕ ಹೆದ್ದಾರಿಯ ಅಂಚಿನಲ್ಲಿ ದಟ್ಟವಾಗಿ ಹುಲ್ಲುಗಳು ಬೆಳೆದು ನಿಂತಿದ್ದು,ಹೆದ್ದಾರಿಯಲ್ಲಿ ಸಂಚರಿಸುವಂತಹ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.ಅಲ್ಲದೆ ತಿರುವಿನಿಂದ ಕೂಡಿದ ರಸ್ತೆ ಕೂಡಾ ಇದಾಗಿದ್ದು,ಹುಲ್ಲುಗಳು ಬೆಳೆದು ನಿಂತ ಪರಿಣಾಮ ಎದುರಿನಿಂದ ಬರುವಂತಹ ವಾಹನಗಳು ಗೊಚರಿಸದಂತಾಗಿದೆ.
ಹುಲ್ಲುಗಳು ಬೆಳೆದು ತಿಂಗಳುಗಳು ಕಳೆದರೂ ಇದರ ತೆರವಿನ ಬಗ್ಗೆ ಗಮನಹರಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಬಗ್ಗೆ ಸಂಬಂಧಪಟ್ಟ ಹೆದ್ದಾರಿ ಇಲಾಖೆ ಹೆದ್ದಾರಿಯಂಚಿನಲ್ಲಿನಲ್ಲಿ ದಟ್ಟವಾಗಿ ಬೆಳೆದ ಹುಲ್ಲನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Kshetra Samachara
11/10/2022 12:26 pm