ಬಜಪೆ :ಕಟೀಲು - ಬಜಪೆ ರಾಜ್ಯ ಹೆದ್ದಾರಿಯ ಎಕ್ಕಾರು ಬೂತಗುಂಡಿ ಎಂಬಲ್ಲಿ ಹೆದ್ದಾರಿಯ ಅಲ್ಲಲ್ಲಿ ಹೊಂಡಗಳು ಉಂಟಾಗಿದ್ದು,ಹೊಂಡಗಳು ರಸ್ತೆಯಲ್ಲಿ ಸಾಗುವಂತಹ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಹೆದ್ದಾರಿಯಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಸಂಚರಿಸುತ್ತದೆ.ಮುಖ್ಯವಾಗಿ ದ್ವಿಚಕ್ರ ವಾಹನ ಸವಾರರ ಪಾಡಂತು ಹೇಳತೀರದು.ಹೆದ್ದಾರಿಯಲ್ಲಿ ಸಾಗುವಂತಹ ಸಂದರ್ಭ ಹೆದ್ದಾರಿಯಲ್ಲಿನ ಹೊಂಡಗಳನ್ನು ತಪ್ಪಿಸಲು ಹರ ಸಾಹಸ ಪಡುವಂತಾಗಿದೆ.ಈ ಬಗ್ಗೆ ಸಂಬಂಧಪಟ್ಟ ಹೆದ್ದಾರಿ ಇಲಾಖೆ ಇತ್ತ ಕಡೆ ಗಮನಹರಿಸಲಿ ಎಂಬುದು ಸಾರ್ವಜನಿಕರ ಆಗ್ರಹ.
Kshetra Samachara
07/10/2022 04:46 pm