ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಲಲಿತಾ ಪಂಚಮಿಯ ಪ್ರಯುಕ್ತ ಶ್ರೀ ದೇವರ ಶೇಷವಸ್ತ್ರ ವಿತರಣೆ

ಬಜಪೆ:ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಪೂಜಾ ಮಹೋತ್ಸವದ ಲಲಿತಾ ಪಂಚಮಿಯ ಪ್ರಯುಕ್ತ ಶುಕ್ರವಾರದಂದು ಸುಮಾರು 15 ಸಾವಿರಮಹಿಳಾ ಭಕ್ತಾಧಿ ಗಳಿಗೆ ಶ್ರೀ ದೇವರ ಶೇಷ ವಸ್ತ್ರದ ವಿತರಣೆಯು ಅನ್ನ ಪ್ರಸಾದದ ಸಂದರ್ಭದಲ್ಲಿ ನಡೆಯಿತು.

ಮಧ್ಯಾಹ್ನ ಹಾಗೂ ರಾತ್ರಿ ಸುಮಾರು 25 ಸಾವಿರ ಭಕ್ತಾಧಿಗಳು ಅನ್ನ ಪ್ರಸಾದವನ್ನು ಸ್ವೀಕರಿಸಿದರು.ದೇವಸ್ಥಾನದ ವತಿಯಿಂದ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮಾಡಲಾಗಿತ್ತು. ದೇವಸ್ಥಾನದಲ್ಲಿ ದೇವರ ದರ್ಶನ ಹಾಗೂ ಅನ್ನ ಪ್ರಸಾದ ವಿತರಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅದ್ಯಾಪಕ ವೃಂದದ 300 ಸ್ವಯಂ ಸೇವಕರು ,ಭದ್ರತೆಗೆ 100 ಪೋಲಿಸರನ್ನು ನೇಮಿಸಲಾಗಿತ್ತು. ಟ್ರಾಫಿಕ್ ವ್ಯವಸ್ಥೆಯಲ್ಲಿ ಮಾರ್ಪಾಡು ಮಾಡಲಾಗಿತ್ತು.

Edited By : PublicNext Desk
Kshetra Samachara

Kshetra Samachara

01/10/2022 12:39 pm

Cinque Terre

1.98 K

Cinque Terre

1

ಸಂಬಂಧಿತ ಸುದ್ದಿ