ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆಯಲ್ಲಿ "ಕೃಷಿ-ಖುಷಿ" & ವನಮಹೋತ್ಸವ ಕಾರ್ಯಕ್ರಮ

ಮೂಡುಬಿದಿರೆ: ಇಲ್ಲಿನ ಕೃಷಿ ವಿಚಾರ ವಿನಿಮಯ ಕೇಂದ್ರ, ಸಮಾಜ ಮಂದಿರ ಸಭಾ ಹಾಗೂ ಎಂ.ಸಿ.ಎಸ್ ಬ್ಯಾಂಕ್ ಮೂಡುಬಿದಿರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಕೃಷಿ-ಖುಷಿ ಮತ್ತು ವನಮಹೋತ್ಸವ ಕಾರ್ಯಕ್ರಮವು ಎಂ.ಸಿ.ಎಸ್ ಬ್ಯಾಂಕ್ ನ ಕಲ್ಪವೃಕ್ಷ ಸಭಾಂಗಣದಲ್ಲಿ ಶನಿವಾರ ನಡೆಯಿತು.

ಎಂ.ಸಿ.ಎಸ್ ಬ್ಯಾಂಕ್ ನ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಉದ್ಘಾಟಿಸಿದರು.ಜೈನ್ ಹೈಸ್ಕೂಲ್ ನ ನಿವೃತ್ತ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ರೈತರಿಗೆ ವಾಕಿಂಗ್, ಜಾಗಿಂಗ್ ಗಳ ಅವಶ್ಯಕತೆ ಇಲ್ಲ. ದಿನನಿತ್ಯದ ಕೃಷಿ ಚಟುವಟಿಕೆಗಳನ್ನು ಮಾಡುವಾಗಲೇ ಅವರ ದೇಹಕ್ಕೆ ವ್ಯಾಯಾಮಗಳಾಗುತ್ತದೆ. ಎಂದ‌ ಅವರು ಕೃಷಿಯಲ್ಲಿ ಯಶಸ್ಸನ್ನು ಸಾಧಿಸಿ ಉತ್ತಮ ಕೃಷಿಕೆಯಾಗಿ ಸಾಗಿ ಬಂದ ಅವರ ಹಳೆ ವಿದ್ಯಾರ್ಥಿನಿ ವಾಣಿಶ್ರೀ ಶ್ರೀಹರ್ಷ ಕೃಷಿಯಲ್ಲಿ ಯಶಸ್ಸನ್ನು ಕಂಡುಕೊಂಡಿರುವುದನ್ನು ತಿಳಿಸಿ, ಆ ಸಾಧಕಿಯನ್ನು ವೇದಿಕೆಗೆ ಕರೆಸಿ ವಿದ್ಯಾರ್ಥಿಗಳಿಗೆ ಉದಾಹರಣೆ ನೀಡಿ ಕೃಷಿಯ ಮಹತ್ವದ ಕುರಿತು ತಿಳಿ ಹೇಳಿದರು.

ಕೃಷಿ ವಿಚಾರ ವಿನಿಮಯ ಕೇಂದ್ರದ ಅಧ್ಯಕ್ಷ ಜಿನೇಂದ್ರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ಆಕಾಶವಾಣಿಯ ಟಿ.ಶ್ಯಾಮ್ ಪ್ರಸಾದ್, ಮೂಡುಬಿದಿರೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಸತೀಶ್, ಕೃಷಿ ವಿಚಾರ ವಿನಿಮಯ ಕೇಂದ್ರದ ಕಾರ್ಯದರ್ಶಿ ಅಭಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.ಕೃಷಿ ವಿಚಾರ ವಿನಿಮಯ ಕೇಂದ್ರದ ಮಾಜಿ ಅಧ್ಯಕ್ಷ ರಾಜವರ್ಮ ಬೈಲಂಗಡಿ ಸ್ವಾಗತಿಸಿ, ಯತಿರಾಜ್ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

24/09/2022 08:51 pm

Cinque Terre

1.98 K

Cinque Terre

0

ಸಂಬಂಧಿತ ಸುದ್ದಿ