ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜೀರ್ಣೋದ್ದಾರದ ಕಾರ್ಯದಲ್ಲಿ ಭಕ್ತರ ಸಹಕಾರದ ಅಗತ್ಯತೆ ಇದೆ - ಸಾಯೀಷ್ ಚೌಟ

ಬಜಪೆ:ಕ್ಷೇತ್ರದಲ್ಲಿ ಬಂಟ ಕಂಬ ರಾಜಾಂಗಣದ ಜೀರ್ಣೋದ್ಧಾರದ ಕಾರ್ಯಗಳು ಭರದಿಂದ ಸಾಗುತ್ತಿದೆ. ಭಕ್ತರ ಸಹಕಾರದಿಂದ ನಿಗದಿತ ವೇಳೆಗೆ ಜೀರ್ಣೋದ್ದಾರದ ಕಾರ್ಯ ಸಂಪೂರ್ಣವಾಗಬೇಕಿದೆ. ಅಲ್ಲದೆ ಭಕ್ತರ ಸಹಕಾರದ ಅಗತ್ಯತೆ ಇದೆ ಎಂದು ದೇವಳದ ಆಡಳಿತಾಧಿಕಾರಿ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿ ಸಾಯೀಷ್ ಚೌಟ ಅವರು ಹೇಳಿದರು. ಅವರು ಪೆರಾರ ಶ್ರೀ ಬ್ರಹ್ಮ ದೇವರು ಬಲವಾಂಡಿ ವ್ಯಾಘ್ರ ಚಾಮುಂಡಿ ದೈವಸ್ಥಾನದ ಬಂಟ ಕಂಬ ರಾಜಾಂಗಣದ ಜೀರ್ಣೋದ್ದಾರದ ಕೆಲಸ ಕಾರ್ಯ ಪ್ರಗತಿಯ ಕುರಿತಂತೆ ಕ್ಷೇತ್ರದಲ್ಲಿ ನಡೆದ ಭಕ್ತಾಭಿಮಾನಿಗಳ ಸಭೆಯಲ್ಲಿ ಮಾತನಾಡಿದರು. ಜೀರ್ಣೋದ್ದಾರ ಸಮಿತಿಯ ಕಾರ್ಯಧ್ಯಕ್ಷ ಶಿವಾಜಿ ಶೆಟ್ಟಿ ಕೊಳಕೆ ಬೈಲು ಮಾತನಾಡಿ ಕ್ಷೇತ್ರದಲ್ಲಿ ಜೀರ್ಣೋದ್ದಾರದ ಕಾರ್ಯಗಳು ನಡೆಯುತ್ತಿದ್ದು,ಭಕ್ತರ ಉದಾರ ಮನಸ್ಸಿನ ಧನ ಸಹಾಯದ ಅವಶ್ಯಕತೆ ಇದೆ ಎಂದು ಹೇಳಿದರು.ಈ ಒಂದು ಪುಣ್ಯ ಕಾರ್ಯದಲ್ಲಿ ಸರ್ವರೂ ಭಾಗಿಯಾಗಬೇಕು ಎಂದರು.

ಈ ಸಂದರ್ಭ ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ .ಜಿ.ಪಂ ಮಾಜಿ ಸದಸ್ಯ ಕೃಷ್ಣ ಅಮೀನ್,ಕ್ಷೇತ್ರದ ಮಧ್ಯಸ್ಥರಾದ ಬ್ರಾಣಬೆಟ್ಟು ಗುತ್ತು ಪ್ರತಾಪ್ ಚಂದ್ರ ಶೆಟ್ಟಿ,ಮೋನಪ್ಪ ಪೂಜಾರಿ,ಪ್ರತ್ಯುಷ್ ಮಲ್ಲಿಬ್ರಾಣಬೆಟ್ಟು ಗುತ್ತು,ಹರೀಶ್ ಶೆಟ್ಟಿ ನಡಿಗುತ್ತು,ಮೋಹನ್ ಪೂಜಾರಿ ಕಬೆತ್ತಿಗುತ್ತು,ಕರುಣಾಕರ ಆಳ್ವ,ಓಂ ಪ್ರಕಾಶ್ ರೈ,ವಾಸು ಶೆಟ್ಟಿ,ಶೇಖರ ಸಫಲಿಗ,ಜೀರ್ಣೋದ್ದಾರ ಸಮಿತಿಯ ಸದಸ್ಯರುಗಳಾದ ವಿದ್ಯಾ ಜೋಗಿ,ಅರುಣ್ ಕೋಟ್ಯಾನ್,ರಮೇಶ್ ಅಂಚನ್,ಜೀರ್ಣೋದ್ದಾರ ಸಮಿತಿಯ ಸರ್ವ ಸದಸ್ಯರುಗಳು ,16 ಗುತ್ತು ಮನೆತನದ ಪ್ರಮುಖರು ಉಪಸ್ಥಿತರಿದ್ದರು.

ಸುರೇಶ್ ಅಂಚನ್ ಮೂಡುಪೆರಾರ್ ಕಾರ್ಯಕ್ರಮ ನಿರೂಪಿಸಿದರು.

Edited By : PublicNext Desk
Kshetra Samachara

Kshetra Samachara

19/09/2022 10:12 pm

Cinque Terre

3.2 K

Cinque Terre

0

ಸಂಬಂಧಿತ ಸುದ್ದಿ