ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಡುಪೆರಾರ:ನದಿಯಲ್ಲಿ ಕಸದ ರಾಶಿ,ತಪ್ಪಿತಸ್ಥರ ವಿರುದ್ದ ಕ್ರಮ

ಬಜಪೆ:ಪಡುಪೆರಾರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕತ್ತಲ್ ಸಾರ್ ನ ಬಳಿಯ ನದಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ಪ್ಲಾಸ್ಟಿಕ್ ಚೀಲಗಳಲ್ಲಿ ಸಂಗ್ರಹವಾಗಿದ್ದ ಕಸವು ನೀರಿನಲ್ಲಿ ತೇಲಿಕೊಂಡು ಬಂದಿದ್ದರಿಂದ ನದಿ ಪಕ್ಕದ ಕೃಷಿಕರು ಆತಂಕಗೊಂಡಿದ್ದರು.ಈ ಬಗ್ಗೆ ನದಿಗೆ ಕಸ ಎಸೆದು ಹೋಗುವವರ ವಿರುದ್ದ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಪಡುಪೆರಾರ ಗ್ರಾಮ ಪಂಚಾಯತ್ ಗೆ ಮನವಿಯನ್ನು ಮಾಡಿದ್ದರು.

ನದಿಯ ಅಣೆಕಟ್ಟಿನ ಸಮೀಪ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಲಾಗಿದ್ದ ಕಸವು ರಾಶಿಬಿದ್ದಿದ್ದು,ಸ್ಥಳಕ್ಕೆ ಪಡುಪೆರಾರ ಗ್ರಾಮ ಪಂಚಾಯತ್ ನ ಪಿಡಿಓ ಉಗ್ಗಪ್ಪ ಮೂಲ್ಯ ಅವರು ಭೇಟಿ ನೀಡಿದ್ದಾರೆ.ಅಲ್ಲದೆ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಮುಂದಾಗಿದ್ದಾರೆ.

Edited By : PublicNext Desk
Kshetra Samachara

Kshetra Samachara

15/09/2022 08:18 am

Cinque Terre

2.01 K

Cinque Terre

0

ಸಂಬಂಧಿತ ಸುದ್ದಿ