ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೈಕಂಬ: ರಸ್ತೆಗೆ ಉರುಳಿಬಿದ್ದ ಬಂಡೆಕಲ್ಲು, ವಾಹನ ಸವಾರರಿಗೆ ತೊಂದರೆ

ಬಜಪೆ : ಕೈಕಂಬದಿಂದ ಪೊಳಲಿಗೆ ಸಂಪರ್ಕಿಸುವ ವಿವೇಕಾನಂದ ರಸ್ತೆಯ ಕಾಜಿಲ ಎಂಬಲ್ಲಿ ರಾಜ್ಯ ಹೆದ್ದಾರಿಗೆ ಗಿಡಮರಗಳೊಂದಿಗೆ ಬಂಡೆಕಲ್ಲು ರಸ್ತೆಗೆ ಬಿದ್ದ ಪರಿಣಾಮ ರಸ್ತೆಯಲ್ಲಿ ಸಂಚರಿಸುವಂತಹ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಕಳೆದ ನಾಲ್ಕು ದಿನಗಳಿಂದ ಈ ಭಾಗದಲ್ಲಿ ಮಳೆಯಾಗುತ್ತಿದ್ದು, ದಿನಂಪ್ರತಿ ರಸ್ತೆಯಲ್ಲಿ ಅತೀ ಹೆಚ್ಚು ವಾಹನಗಳ ಸಂಚಾರವಿದೆ. ಬಂಡೆಕಲ್ಲು ಬಿದ್ದ ರಸ್ತೆಯು ತಿರುವಿನಿಂದ ಕೂಡಿದ್ದು, ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಇತ್ತ ಗಮನ ಹರಿಸಿ ಶೀಘ್ರ ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು ಎಮನದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

09/09/2022 09:23 pm

Cinque Terre

2.34 K

Cinque Terre

0

ಸಂಬಂಧಿತ ಸುದ್ದಿ