ಮೂಡುಬಿದಿರೆ: ನೀಟ್ ಪರೀಕ್ಷೆಯಲ್ಲಿ ಆಳ್ವಾಸ್ ಪಿಯು ಕಾಲೇಜಿನ ಮನೋಜ್ ಎನ್ 690 ಅಂಕ ಪಡೆಯುವ ಮೂಲಕ ಕೆಟಗರಿ ವಿಭಾಗದಲ್ಲಿ ರಾಷ್ಟ್ರಮಟ್ಟದ 54ನೇ ರ‍್ಯಾಂಕ್ ಗಳಿಸಿದ್ದಾರೆ. ರಾಹುಲ್ ಜಿ.ಪಾಟೀಲ್ 39ನೇ ರ‍್ಯಾಂಕ್ ಹಾಗೂ ನರಸೇಗೌಡ ಬಿ.ಎಂ 85ನೇ ರ‍್ಯಾಂಕ್ ಗಳಿಸಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ 600 ಕ್ಕಿಂತ ಅಧಿಕ ಅಂಕಗಳನ್ನ 31ವಿದ್ಯಾರ್ಥಿಗಳು 500ಕ್ಕಿಂತ ಅಧಿಕ ಅಂಕಗಳನ್ನ 237 ವಿದ್ಯಾರ್ಥಿಗಳು ೪ ಕಿಂತ ಅಧಿಕ ಅಂಕಗಳನ್ನು _576 ವಿದ್ಯಾರ್ಥಿಗಳು 300ಕ್ಕಿಂತ ಅಧಿಕ ಅಂಕಗಳನ್ನು 1002 ವಿದ್ಯಾರ್ಥಿಗಳು ಪಡೆದಿದ್ದಾರೆ.
600ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳು:
ಮನೋಜ್ ಎನ್.(690), ಸೃಷ್ಟಿ ಬಿ.(660), ಭರತ್ ಎಂ.ಯು(657), ನಮನ್ ಜೈನ್(645), ಸುಹಾಸ್ ಗೌಡ(643), ವರ್ಷಿತಾ(641), ಸತೀಶ್ ಶಂಕರ್(640), ರಾಹುಲ್(635), ಸುರೇಶ್ ಸಂಗಪ್ಪ(622), ತೃಪ್ತಿ ಶಂಕರ್(619), ಅಕ್ಷರಾ(61 6), ದೀಕ್ಷಿತ್ ನಾಯಕ ಎನ್.( 615), ಅಕ್ಷಯ್ ಕುಮಾರ್ ಆರ್.(615), ಗೌರವ್(615), ಅಭಿಷೇಕ್ ವಿ.ಎಲ್(614), ಉಮಾ ಶಂಕರ್(613), ಅಭಿಷೇಕ್ ಬಿ.ಎನ್(613), ಹರ್ಷಿತಾ ಕೆ.ಎಸ್.(611), ಚಂದ್ರಶೇಖರ್ ಸಂಗಪ್ಪ(610), ಶಶ್ವಿತಾ ರೈ.ಬಿ(608), ಅಲ್ ಸಲಾಂ ಗಾಝಿ(607). ಈಶ್ವರಿ ಪೂಜಾರಿ(607), ರಾಹುಲ್ ಆರ್.(606), ವೈಭವ್ ಸುರೇಶ್(606), ವೀರೇಂದ್ರ ಗೌಡ(606), ರಿತೇಶಾ(605), ಪ್ರಜ್ವಲ್ ಬಿ.(603), ರಿತೇಶ್ ರಾಜೇಂದ್ರ(602), ಶಿವಕುಮಾರ್ ಬಿ.(602). ಪ್ರಜ್ವಲ್ ಬಿ.(601), ಇಂಪನಾ ಕೆ.ಆರ್(600). ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ ಸದಾಕತ್ ಹಾಗೂ ಆಡಳಿತಾಧಿಕಾರಿ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.
500ಕ್ಕಿಂತ ಅಧಿಕ ಅಂಕಗಳಿಸಿದ 237 ವಿದ್ಯಾರ್ಥಿಗಳಲ್ಲಿ 122ವಿದ್ಯಾರ್ಥಿಗಳು ಸಂಸ್ಥೆಯ ದತ್ತು ಸ್ವೀಕಾರ ದಡಿ ವಿದ್ಯಾಭ್ಯಾಸವನ್ನು ಪೂರೈಸಿದ್ದು, ಎರಡು ಕೋಟಿಗೂ ಅಧಿಕ ವೆಚ್ಚವನ್ನು ಈ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ವ್ಯಯಿಸಲಾಗಿದೆ. ಈ ಬಾರಿ 450ಕ್ಕಿಂತ ಅಧಿಕ ವಿದ್ಯಾರ್ಥಿಗಳು ಸರಕಾರಿ ಕೋಟಾ ದಡಿ ವೈದ್ಯಕೀಯ ಎಂಬಿಬಿಎಸ್ ಸೀಟು ಪಡೆಯುವ ಸಾಧ್ಯತೆ ಇದೆ. ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನಅಧ್ಯಕ್ಷ -ಡಾ.ಎಂ ಮೋಹನ ಆಳ್ವ ಅಭಿಪ್ರಾಯ ಪಟ್ಟಿದ್ದಾರೆ.
Kshetra Samachara
08/09/2022 09:24 pm