ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆಯಲ್ಲಿ ದ.ಕ ಜಿಲ್ಲಾಧಿಕಾರಿ ಜೊತೆ ಸಾರ್ವಜನಿಕರ ಕುಂದುಕೊರತೆ ಸಭೆ

ಮೂಡುಬಿದಿರೆ: ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಶೀಲಿಸಿ ಬಗೆಹರಿಸಲು ಬುಧವಾರ ಇಲ್ಲಿನ ತಾಲ್ಲೂಕು ಆಡಳಿತ ಸೌಧದಲ್ಲಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಬುಧವಾರ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದರು.

ಪತ್ರಕರ್ತ ಕೃಷ್ಣ ಕುಮಾರ್ ಅವರು ಮಾತನಾಡಿ ಮಾರೂರು ಗ್ರಾಮದಲ್ಲಿ 33 ಫಲಾನುಭವಿಗಳ ಪೈಕಿ 30 ಫಲಾ ನುಭವಿಗಳಿಗೆ ನಿವೇಶನ ಹಂಚಿಕೆಯಾಗಿ ಉಳಿದ 6 ಫಲಾನುಭವಿಗಳ ಅರ್ಜಿಯನ್ನು ತಡೆಹಿಡಿದು ಫಲಾನುಭವಿಗಳಿಗೆ ತೊಂದರೆ ನೀಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು.ಈ ಬಗ್ಗೆ ಮಂಗಳೂರಿನ ಹೌಸಿಂಗ್‌ ಕನ್ಸಲೆಂಟ್ ಅಧಿಕಾರಿ ಗಿರೀಶ್ ಅವರನ್ನು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡು ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಿಕೊಡುವಂತೆ ಸೂಚಿಸಿದರಲ್ಲದೆ ಈ ವಿಷಯವನ್ನು ನೀವು ಕೂಡ ಫಾಲೋಅಪ್ ಮಾಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಇಂದು ಅವರಿಗೆ ಸೂಚನೆಯನ್ನು ನೀಡಿದರು.

ಪಡುಮಾರ್ನಾಡು ಗ್ರಾಮದ ದಿನೇಶ್ ದೇವಾಡಿಗ ಎಂಬವರ ಜಾಗದ ಪ್ಲಾಟಿಂಗ್‌ಗಾಗಿ ಮೂರು ವರ್ಷದಿಂದ ಸತಾಯಿಸುತ್ತಿದ್ದ ಸ್ಥಳೀಯ ಪ್ರಭಾರ ಗ್ರಾಮ ಕರಣಿಕ ಅನಿಲ್‌ರನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾಧಿಕಾರಿ, ಸಾರ್ವಜನಿಕರೊಬ್ಬರ ಕೆಲಸ ಮಾಡುವಲ್ಲಿ ವಿಳಂಬ ಧೋರಣಿ ಅನುಸರಿಸಿದಕ್ಕೆ ಕಾರಣ ಕೇಳಿದರಲ್ಲದೆ ಅದಕ್ಕೆ ಸಂಬಂಧಿಸಿದ ಕಡತವನ್ನು ತರುವಂತೆ ಸೂಚಿಸಿದರು. ಸ್ವಲ್ಪ ಹೊತ್ತಿನ ಬಳಿಕ ವಾಪಾಸಾದ ಗ್ರಾಮಕರಣಿಕರು ಜಿಲ್ಲಾಧಿಕಾರಿಗೆ ಅಸ್ಪಷ್ಟ ಮಾಹಿತಿ ನೀಡಿದಾಗ ಅಸಮಧಾನಗೊಂಡ ಅವರು ಹತ್ತು ದಿನಗಳೊಳಗೆ ಅರ್ಜಿದಾರರ ಕೆಲಸ ಮಾಡಿಕೊಡದಿದ್ದರೆ ಗ್ರಾಮಕರಣಿಕರನ್ನು ಅಮಾನತುಗೊಳಿಸುವಂತೆ ತಹಶೀಲ್ದಾರ್ ಸಚ್ಚಿದಾನಂದ ಸತ್ಯಪ್ಪ ಕುಚನೂರುಗೆ ಸೂಚಿಸಿದರು.

ಗಾಲಿಕುರ್ಚಿಯಲ್ಲಿ ನಡೆದಾಡುತ್ತಿರುವ ಕೊಡಂಗಲ್ಲಿನ ಬಾಲಕೃಷ್ಣ ನಾಯಕ್ ತನಗೆ ವಾಸಕ್ಕೆ ಸರಕಾರದಿಂದ ನಿವೇಶನ ನೀಡುವಂತೆ ಮತ್ತು ನನಗೆ ಓಡಾಡಲು ತ್ರಿಚಕ್ರ ವಾಹ ನವನ್ನು ನೀಡುವಂತೆ ಮನವಿ ಮಾಡಿದಾಗ ಮೊದಲು ವಸತಿ ರಹಿತರ ಪಟ್ಟಿಯಲ್ಲಿ ನಿಮ್ಮ ಹೆಸರು ನೋಂದಾಯಿಸಿಕೊಳ್ಳಿ, ನಂತರ ಆದ್ಯತಾ ನೆಲೆಯಲ್ಲಿ ನಿಮ್ಮ ಬೇಡಿಕೆಗೆ ಸ್ಪಂದಿ ಸುವುದಾಗಿ ತಿಳಿಸಿದ ಜಿಲ್ಲಾಧಿಕಾರಿ ತ್ರಿಚಕ್ರ ವಾಹನ ನೀಡಲು ಅವಕಾಶವಿದ್ದರೆ ಪುರಸಭೆಯಿಂದ ನೀಡುವಂತೆ ಮುಖ್ಯಾಧಿಕಾರಿಗೆ ತಿಳಿಸಿದರು. ಅಧಿಕಾರಿಗಳು ಸಾರ್ವಜನಿಕರ ಕೆಲಸವನ್ನು ಕ್ಲಪ್ತ ಸಮಯದಲ್ಲಿ ಮಾಡಿಕೊಡಿ ಇದರಿಂದಾಗಿ ಮೂರನೇ ವ್ಯಕ್ತಿಗಳ ಹಸ್ತಕ್ಷೇಪ ನಿಲ್ಲುತ್ತದೆ ಎಂದು ಸಲಹೆ ನೀಡಿದರು.

Edited By : PublicNext Desk
Kshetra Samachara

Kshetra Samachara

07/09/2022 07:47 pm

Cinque Terre

1.99 K

Cinque Terre

0

ಸಂಬಂಧಿತ ಸುದ್ದಿ