ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೆರ್ಮುದೆ: ಬಿಲ್ಲವ ಸಮಾಜ ಸೇವಾ ಸಂಘದಿಂದ ಸ್ವಚ್ಛತಾ ಕಾರ್ಯ

ಬಜಪೆ: ಬಿಲ್ಲವ ಸಮಾಜ ಸೇವಾ ಸಂಘ(ರಿ) ಎಕ್ಕಾರು - ಪೆರ್ಮುದೆಯಿಂದ ಇಂದು (ಭಾನುವಾರ) ಸಂಘದ ಸುತ್ತಮುತ್ತ ಬೃಹತ್ ಸ್ವಚ್ಛತಾ ಕಾರ್ಯ ನಡೆಯಿತು. ಸಂಘದಿಂದ ಈ ಬಾರಿ ನಡೆಯುವಂತಹ ನಾರಾಯಣ ಗುರು ಜಯಂತಿ ಆಚರಣೆಯ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಇಂದು ಸಂಘದ ಸರ್ವಸದಸ್ಯರು ಸೇರಿ ಬೃಹತ್ ಸ್ವಚ್ಛತಾ ಕಾರ್ಯವನ್ನು ಮಾಡಿದರು. ಸ್ವಚ್ಛತಾ ಕಾರ್ಯದಲ್ಲಿ ಸಂಘದ ಗೌರವಾಧ್ಯಕ್ಷ ಯಾದವ ಕೋಟ್ಯಾನ್, ಅಧ್ಯಕ್ಷ ಪ್ರಕಾಶ್ ಕುಕ್ಯಾನ್, ಪ್ರಧಾನ ಕಾರ್ಯದರ್ಶಿ ನವೀನ್ ಪಿ ಅಮೀನ್, ಅರ್ಚಕ ಹೊನ್ನಯ್ಯ ಅಮೀನ್, ಸಂಘಟನಾ ಕಾರ್ಯದರ್ಶಿ ಶಿವರಾಮ ಕೋಟ್ಯಾನ್, ಕಿಶೋರ್ ಕೋಟ್ಯಾನ್, ಗೌರವ ಸಲಹೆಗಾರರಾದ ಸುದೀಪ್ ಅರ್ ಅಮೀನ್, ಸುಧಾಕರ ಪೂಜಾರಿ ಮುಕ್ಕೂಡಿ ಹಾಗೂ ಸರ್ವ ಸದಸ್ಯರುಗಳು ಭಾಗವಹಿಸಿದ್ದರು.

Edited By : PublicNext Desk
Kshetra Samachara

Kshetra Samachara

28/08/2022 09:20 pm

Cinque Terre

2.4 K

Cinque Terre

0

ಸಂಬಂಧಿತ ಸುದ್ದಿ