ಬಜಪೆ: ವಿಶ್ವ ಹಿಂದೂ ಪರಿಷದ್ ಭಜರಂಗದಳ ಗುರುಪುರ ಪ್ರಖಂಡದಿಂದ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ವಾಹನ ಬೈಕ್ ಜಾಥಾ ಹಾಗೂ ಅಖಂಡ ಭಾರತ ಸಂಕಲ್ಪ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಸಂದರ್ಭದಲ್ಲಿ ಸ್ವಾರ್ಥ ರಾಜಕೀಯಕ್ಕಾಗಿ ಮತೀಯ ಆಧಾರದಲ್ಲಿ ದೇಶವನ್ನು ವಿಭಜನೆ ಮಾಡಿದ ಕಹಿ ಘಟನೆಯನ್ನು ಇಂದಿನ ಸಮಾಜಕ್ಕೆ ತಿಳಿಸುವ ಮತ್ತು ಕಳೆದು ಹೋಗಿರುವ ಭಾರತ ಭೂಭಾಗಗಳನ್ನು ಮತ್ತೆ ಪಡೆದು ಅಖಂಡ ಭಾರತ ನಿರ್ಮಾಣ ಮಾಡಬೇಕೆನ್ನುವ ಗುರಿಯೊಂದಿಗೆ ವಿಹಿಂಪ ಭಜರಂಗದಳದ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಯಿತು.
ಬೈಕ್ ಜಾಥಕ್ಕೆ ಗಂಜಿಮಠದಲ್ಲಿ ಭಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್ ಚಾಲನೆ ನೀಡಿದರು. ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್ ಸೇನವ, ಗುರುಪುರ ಪ್ರಖಂಡ ವಿಹಿಂಪ ಅಧ್ಯಕ್ಷ ವಿಷ್ಣು ಕಾಮತ್, ಸದಾಶಿವ ಮಿಜಾರ್, ಜಿಲ್ಲಾ ಹಾಗೂ ಪ್ರಖಂಡದ ವಿಹಿಂಪ ಭಜರಂಗದ ಮಾತೃಶಕ್ತಿ ದುರ್ಗಾವಾಹಿನಿ ಪ್ರಮುಖರು ಮತ್ತು ಕಾರ್ಯಕರ್ತರು ಹಾಜರಿದ್ದರು.
Kshetra Samachara
14/08/2022 06:59 pm