ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆಕ್ರಮ ಮರ ಸಾಗಾಟ: ವಾಹನ ಅರಣ್ಯ ಇಲಾಖೆಯ

ವಶಕ್ಕೆ ಮೂಡುಬಿದಿರೆ: ಪುರಸಭೆ ವ್ಯಾಪ್ತಿಯ ವಿಶಾಲನಗರ ಬಳಿ ಅಕ್ರಮವಾಗಿ ಅಕೇಶಿಯಾ ಮರ ಸಾಗಟ ಮಾಡುತ್ತಿದ್ದ ವಾಹನ ಹಾಗೂ ಆರೋಪಿಯನ್ನು ಮಂಗಳೂರು ಅರಣ್ಯ ಸಂಚಾರಿದಳದ ಸಿಬ್ಬಂದಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ವಶ ಪಡಿಸಿಕೊಂಡಿರುವ ವಾಹನ ಹಾಗೂ ಸ್ವತ್ತುಗಳ ಮೌಲ್ಯ ಸುಮಾರು19 ಲಕ್ಷ ರೂಪಾಯಿಗಳಾಗಿರಬಹುದೆಂದು ಅಂದಾಜಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒರ್ವನನ್ನು ವಶಕ್ಕೆ ಪಡೆದುಕೊಂಡಿದ್ದು ತನಿಖೆ ನಡೆಸಲಾಗುತ್ತಿದೆ.ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿಪಿ.ಶ್ರೀಧರ್ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸಂಪತ್ ಪಟೇಲ್, ಉಪವಲಯ ಅರಣ್ಯಾಧಿಕಾರಿಗಳಾದ ಕಾಂತರಾಜ್, ಪ್ರಕಾಶ್ ಶೆಟ್ಟಿ, ಸಂತೋಷ್, ವಿಕಾಸ್‌ ವಾಹನ ಚಾಲಕ ಜಯಪ್ರಕಾಶ ಭಾಗವಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

13/08/2022 11:00 am

Cinque Terre

1.31 K

Cinque Terre

0

ಸಂಬಂಧಿತ ಸುದ್ದಿ