ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ:ಪೊಲೀಸರಿಗೆ ಅವಾಚ್ಯ ಶಬ್ದದಿಂದ ನಿಂದನೆ,ಹಲ್ಲೆ : ಆರೋಪಿ ಬಂಧನ

ಬಜಪೆ:ಕರ್ತವ್ಯಕ್ಕೆ ತೆರಳಿದ್ದ ಬಜಪೆ ಠಾಣಾ ಅಪರಾಧ ವಿಭಾಗದ ಸಿಬ್ಬಂದಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ , ಹಲ್ಲೆ ನಡೆಸಿದ ಆರೋಪಿ ಯೊಬ್ಬನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಅದ್ಯಪಾಡಿಯ ಮಾಂಟೆಬೆಲು ನಿವಾಸಿ ಮೊಹಮ್ಮದ್ ಅಜರುದ್ದೀನ್(31)ಗುರುತಿಸಲಾಗಿದೆ.

ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಈತನ ಮತ್ತು ಈತನ ಮನೆಯವರ ಮೇಲೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ಮೇಲೆ ಇತ್ತೀಚೆಗೆ ಮೂಡಬಿದ್ರೆ ಠಾಣೆಯ ಕಲ್ಲಬೆಟ್ಟುವಿನಲ್ಲಿ ನಡೆದ ದನಗಳವು , ಕಾರ್ಕಳ ಬಂಗ್ಲೆಗುಡ್ಡೆಯಲ್ಲಿ ನಡೆದ ದನ ಕಳವು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ದಸ್ತಗಿರಿಗೆ ಸಿಗದೆ ತಲೆ ಮರೆಸಿಕೊಂಡಿದ್ದನು .ಈತನ ಮೇಲೆ ಈ ಹಿಂದೆ ಬಜಪೆ ಠಾಣೆಯಲ್ಲಿ ದರೋಡೆ , ದನಗಳವು ಸೇರಿದಂತೆ 2 ಪ್ರಕರಣ , ಕಾರ್ಕಳ ನಗರ ಠಾಣೆಯಲ್ಲಿ 2 ದನಗಳವು ಪ್ರಕರಣ , ಕಾರ್ಕಳ ಗ್ರಾಮಾಂತರ 1 , ಮೂಡಬಿದ್ರೆ ಠಾಣೆಯಲ್ಲಿ 1 ದನಗಳವು ಪ್ರಕರಣ ದಾಖಲಾಗಿರುತ್ತದೆ .

ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿ ಕುಮಾರ್ IPS ರವರ ಮಾರ್ಗದರ್ಶನದಂತೆ , DCP ಅಂಶು ಕುಮಾರ್ ' ದಿನೇಶ್ ಕುಮಾರ್ DCP ಮತ್ತು ಮಂಗಳೂರು ಉತ್ತರ ಉಪ ವಿಭಾಗದ ACP ಮಹೇಶ್ ಕುಮಾರ್ ರವರ ನಿರ್ದೇಶನದಂತೆ , ಈ ಕಾರ್ಯಚರಣೆಯಲ್ಲಿ ಬಜಪೆ ಠಾಣಾ ಪಿ.ಐ. ಪಕಾಶ್ ಮತ್ತು ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.ಬಜಪೆ ಠಾಣೆಯಲ್ಲಿ ಒಂದೇ ವಾರದಲ್ಲಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಎರಡನೇ ಪ್ರಕರಣ ಇದಾಗಿದೆ .

Edited By : PublicNext Desk
Kshetra Samachara

Kshetra Samachara

09/08/2022 08:11 pm

Cinque Terre

1.58 K

Cinque Terre

0

ಸಂಬಂಧಿತ ಸುದ್ದಿ