ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ನಾಪತ್ತೆಯಾಗಿದ್ದ ವೃದ್ಧನ ಶವ ನೇತ್ರಾವತಿ ನದಿಯಲ್ಲಿ ಪತ್ತೆ!

ಉಳ್ಳಾಲ:ಮನೆಯಿಂದ ನಾಪತ್ತೆಯಾಗಿದ್ದ ವೃದ್ಧರೋರ್ವರ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದ್ದು,ನಿರಂತರ ಚರ್ಮ ವ್ಯಾಧಿಯಿಂದ ಬಳಲುತ್ತಿದ್ದ ವೃದ್ಧ ಖಿನ್ನತೆಗೊಳಗಾಗಿ ಆತ್ಮಹತ್ಯೆಗೈದಿರುವುದಾಗಿ ತಿಳಿದು ಬಂದಿದೆ.

ಮಂಗಳೂರಿನ ಜಪ್ಪು ,ಮಜಿಲ ನಿವಾಸಿ ಕುಮಾರ್ (78) ಆತ್ಮಹತ್ಯೆಗೈದ ದುರ್ದೈವಿ.ಕುಮಾರ್ ನಿನ್ನೆ ಮಧ್ಯಾಹ್ನದಿಂದ ಮನೆಯಿಂದ ನಾಪತ್ತೆಯಾಗಿದ್ದರಂತೆ.ಇಂದು ಬೆಳಿಗ್ಗೆ ಉಳ್ಳಾಲ, ಉಳಿಯ ಹೊಯ್ಗೆ ನೇತ್ರಾವತಿ ನದಿಯಲ್ಲಿ ಮೃತ ದೇಹವೊಂದು ತೇಲುತ್ತಿದ್ದು ಸ್ಥಳೀಯ‌ ಕಿಂಗ್ ಸ್ಟಾರ್ ಸೇವಾ ಸಮಿತಿ‌ ಅಧ್ಯಕ್ಷರು ಜೀವರಕ್ಷಕರಾದ ಪ್ರೇಮ್ ಪ್ರಕಾಶ್ ಡಿಸೋಜ ಅವರು ಶವವನ್ನ ಮೇಲಕ್ಕೆತ್ತಿ ದಡಕ್ಕೆ ಹಾಕಿದ್ದಾರೆ.

ಪಾಂಡೇಶ್ವರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಶವದ ಗುರುತು ಹಿಡಿದು ಮರಣೋತ್ತರ ಪರೀಕ್ಷೆಗೆ ರವಾಣಿಸಿದ್ದಾರೆ.ಕುಮಾರ್ ಅವರು ದೀರ್ಘ ಕಾಲದಿಂದ ಚರ್ಮ ವ್ಯಾಧಿಯಿಂದ ಬಳಲುತ್ತಿದ್ದು ಈ ಹಿಂದೆಯೂ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರಂತೆ.

Edited By :
Kshetra Samachara

Kshetra Samachara

29/07/2022 09:20 am

Cinque Terre

5.01 K

Cinque Terre

0

ಸಂಬಂಧಿತ ಸುದ್ದಿ