ಮೂಡುಬಿದಿರೆ: ಆಳ್ವಾಸ್ ಆಯುರ್ವೇದ ಕಾಲೇಜಿನ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ಆಶ್ರಯದಲ್ಲಿ ಪರಂಪರೆಯಂತೆ ಆಟಿ ಕಷಾಯವನ್ನು ತಯಾರಿಸಿ ಉಚಿತವಾಗಿ ಕಾಲೇಜಿನ ಆವರಣದಲ್ಲಿ ವಿತರಿಸಲಾಯಿತು.
ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ, ಪ್ರಾಧ್ಯಾಪಕ ಡಾ.ಸುಬ್ರಹ್ಮಣ್ಯ ಪದ್ಯಾಣ ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿರ್ತಾಡಿಯ ಜವಾಹರಲಾಲ್ ಪ್ರೌಢಶಾಲೆಯ ಅಧ್ಯಾಪಕರಾದ ಗೋವರ್ಧನ ಭಟ್ ಉದ್ಘಾಟಿಸಿದರು. ಕಾಲೇಜಿನ ಪ್ರಾಧ್ಯಾಪಕ ವೃಂದದವರು ಕರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಟಿ ಅಮವಾಸ್ಯೆಯ ವಿಶೇಷವಾದ ಸರ್ವರೋಗ ನಿರೋಧಕ ಪಾರಂಪರಿಕ ದಿವ್ಯಔಷಧವನ್ನು ವಿದ್ಯಾರ್ಥಿಗಳು, ಉಪನ್ಯಾಸಕ ವೃಂದ ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು ೩೦೦೦ ಕ್ಕಿಂತಲೂ ಅಧಿಕ ಮಂದಿ ಸ್ವೀಕರಿಸಿದರು
Kshetra Samachara
28/07/2022 07:26 pm