ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುರತ್ಕಲ್ :ಪ್ಯಾಸೆಂಜರ್ಸ್ ರಿಸರ್ವೇಷನ್ ಸೆಂಟರ್ ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಶಾಸಕರಾದ ಡಾ.ಭರತ್ ಶೆಟ್ಟಿಯವರಿಂದ ಶುಭಾರಂಭ

ಸುರತ್ಕಲ್:ಕಳೆದ ಹತ್ತು ವರ್ಷಗಳ ಬೇಡಿಕೆಯಾಗಿದ್ದ ಪ್ಯಾಸೆಂಜರ್ಸ್ ರಿಸರ್ವೇಷನ್ ಸೆಂಟರ್ ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಶುಭಾರಂಭಗೊಳ್ಳುತ್ತಿದೆ.

ಶಾಸಕ ಡಾ.ಭರತ್ ಶೆಟ್ಟಿಯವರು ಇಂದು ಪಿಆರ್ ಎಸ್ ಸೌಲಭ್ಯವನ್ನು ಸಾಂಕೇತಿಕವಾಗಿ ಟಿಕೆಟ್ ನೀಡುವ ಮೂಲಕ ಚಾಲನೆ ನೀಡಿದರು.ಸಂಸದ ನಳಿನ್ ಕುಮಾರ್ ಕಟೀಲ್ ಅವರು ರೈಲ್ವೆ ನಿಲ್ದಾಣದ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ ಎಂದು ಹೇಳಿದ ಶಾಸಕರು, ಸುರತ್ಕಲ್ ಪರಿಸರದ ಬೃಹತ್ ಕಂಪನಿ‌ಗಳು ,ಎನ್ಐಟಿಕೆ ಕಾಲೇಜು ಸಹಿತ ನೌಕರ ವರ್ಗಕ್ಕೆ, ವಿದ್ಯಾರ್ಥಿಗಳು ಹಾಗೂ ಮುಖ್ಯವಾಗಿ ಮುಂಬೈ ಹಾಗೂ ಬೆಂಗಳೂರಿನಲ್ಲಿ ವಿವಿಧ ಕಾರಣಗಳಿಗಾಗಿ ವಲಸೆ ಹೋದ ಸಾವಿರಾರು ಮಂದಿಗೆ ಇನ್ನು ಸುರತ್ಕಲ್ ನಲ್ಲಿ ಸೀಟು ಕಾದಿರಿಸಬಹುದು.

ಈ ಹಿಂದೆ ಕೊರೊನಾ ಸಂದರ್ಭ ಲಾಲ್ ಬಾಗ್ ನಲ್ಲಿದ್ದ ಪಿಅರ್ ಎಸ್ ಮುಚ್ಚಲಾಗಿದೆ.

ಮಂಗಳೂರು, ಉಡುಪಿ ಕೇಂದ್ರ ನಿಲ್ದಾಣಕ್ಕೆ ಹೋಗುವ ಸ್ಥಿತಿಯಿತ್ತು. ಅಧಿಕಾರಿಗಳಿಗೆ ಸೂಚಿಸಿದ ಮೇರೆಗೆ ಕೊಂಕಣ ರೈಲ್ವೆ ಹಿರಿಯ ಅಧಿಕಾರಿಗಳು ಒಂದು ತಿಂಗಳ ಅಂತರದಲ್ಲಿ ಕ್ಷಿಪ್ರವಾಗಿ ಪಿಅರ್ ಎಸ್ ಆರಂಭಿಸಿದ್ದಾರೆ ಎಂದರು. 1.50 ಕೋಟಿ ರೂ.ವೆಚ್ಚದಲ್ಲಿ ರೈಲ್ವೆ ನಿಲ್ದಾಣದ ಮೂಲಸೌಕರ್ಯ ಮೇಲ್ದರ್ಜೆಗೆ ಏರಿಸಲು ಈಗಾಗಲೇ 50 ಲಕ್ಷ ಬಿಡುಗಡೆಯಾಗಿದೆ. 1 ಕೋಟಿ ರೂ. ನಲ್ಲಿ ರಸ್ತೆ, ಪಾರ್ಕಿಂಗ್, ಶೆಲ್ಟರ್, ಎಲ್ ಇಡಿ ಲೈಟ್ ಅಳವಡಿಕೆ ಮತ್ತಿತರ ಯೋಜನೆ ಸೇರಿದೆ ಎಂದರು.

ಕಾರ್ಯಕ್ರಮದಲ್ಲಿ ಚೇರ್ಮನ್ ಮತ್ತು ಸಿಎಂಡಿ ಸಂಜಯ್ ಗುಪ್ತ, ಕಾರವಾರ ರೀಜನ್ ರೈಲ್ವೆ ಮ್ಯಾನೇಜರ್ ಬಿ.ಬಿ ನಿಕ್ಕಮ್, ಹಿರಿಯ ಆರ್ ಟಿ ಎಂ ವಿನಯ್ ಕುಮಾರ್, ಪಬ್ಲಿಕ್ ರಿಲೇಷನ್ ಸುಧಾ ಕೃಷ್ಣ ಮೂರ್ತಿ, ಎಟಿಎಂ ಜಿ.ಡಿ ಮೀನ,ಮನಪಾ ಸದಸ್ಯರು, ಬಿಜೆಪಿ ಮುಖಂಡರು,ಸುರತ್ಕಲ್ ನಾಗರಿಕ ಸಲಹಾ ಸಮಿತಿ ಪದಾಧಿಕಾರಿಗಳು ಜತೆಗಿದ್ದರು.

ಸ್ಮಾರ್ಟ್ ರೈಲ್ವೆ ನಿಲ್ದಾಣ ಮಾಡಲು ಶಾಸಕರ ಸಂಕಲ್ಪ ಕೊಂಕಣ ರೈಲ್ವೆ ನಿಲ್ದಾಣಗಳಲ್ಲಿ ಸುರತ್ಕಲ್ ರೈಲು ನಿಲ್ದಾಣ ಪಡುಬಿದ್ರಿಯಿಂದ ಮಂಗಳೂರುವರೆಗೆ ಬಹು ಜನರಿಗೆ ಅನುಕೂಲಕರ ನಿಲ್ದಾಣವಾಗಿದೆ. ಕೊಂಕಣ ರೈಲ್ವೆ ನಿಗಮವಾಗಿರುವುದರಿಂದ ಸೀಮಿತ ಆದಾಯದಲ್ಲಿ ಅಭಿವೃದ್ಧಿ ಮಾಡುವುದು ಇಲಾಖೆಗೆ ಕಷ್ಟವಾದ ಕಾರಣ, ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಲ್ಲಿರುವ ಏಕೈಕ ನಿಲ್ದಾಣವಾಗಿ ಸುರತ್ಕಲ್ ರೈಲು ನಿಲ್ದಾಣವನ್ನು ಇದೀಗ ಸ್ಮಾರ್ಟ್ ರೈಲ್ವೆ ನಿಲ್ದಾಣ ಮಾಡುವಲ್ಲಿ ಹಂತ ಹಂತವಾಗಿ ಯೋಜನೆ ರೂಪಿಸಲು ಶಾಸಕರಾದ ಡಾ.ಭರತ್ ಶೆಟ್ಟಿಯವರು ಮುಂದಾಗಿದ್ದಾರೆ.

Edited By : PublicNext Desk
Kshetra Samachara

Kshetra Samachara

25/07/2022 04:42 pm

Cinque Terre

1.86 K

Cinque Terre

0

ಸಂಬಂಧಿತ ಸುದ್ದಿ