ಕಾರ್ಕಳ: ತಾಲೂಕು ಕಚೇರಿಯಲ್ಲಿ ಗ್ರಾಮ ಕರಣಿಕರಾಗಿ ಸೇವೆ ಸಲ್ಲಿಸುತ್ತಿದ್ದ ಸುಶ್ಮಿತಾ ದೇವಾಡಿಗ(26) ಎಂಬವರು ಭಾನುವಾರ ತಡರಾತ್ರಿ ತಾವು ವಾಸವಿದ್ದ ಹುಡ್ಕೋ ಕಾಲೊನಿಯ ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವಿವಾಹಿತರಾಗಿದ್ದ ಸುಶ್ಮಿತಾ ಮೂಲತಃ ಕಾರ್ಕಳದ ಪೆರ್ವಾಜೆಯವರಾಗಿದ್ದು ತಂದೆ ತಾಯಿವರ ಜತೆ ಸರಕಾರಿ ವಸತಿಗೃಹದಲ್ಲಿ ವಾಸವಾಗಿದ್ದರು. ಅವರ ಆತ್ಮಹತ್ಯೆಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಿದೆ.
ಸುಶ್ಮಿತಾ ಅವರ ಪೋಷಕರಿಗೆ ಪೆರ್ವಾಜೆಯಲ್ಲಿ ಸ್ವಂತ ಜಾಗವಿಲ್ಲದ ಹಿನ್ನೆಲೆಯಲ್ಲಿ ಅವರ ಅಜ್ಜಿ ಮನೆಯಾದ ಹೆಬ್ರಿ ತಾಲೂಕಿನ ಚಾರ ಎಂಬಲ್ಲಿನ ಜಾಗದಲ್ಲಿ ಹೊಸ ಮನೆ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು.
ಗೃಹಪ್ರವೇಶದ ಬಳಿಕ ಅವರ ಮದುವೆಯ ಬಗ್ಗೆ ಪೋಷಕರು ನಿರ್ಧರಿಸಿದ್ದರು ಎನ್ನಲಾಗಿದೆ.
ಕಾರ್ಕಳ ತಾಲೂಕು ಕಚೇರಿಯಲ್ಲಿ ಪಿಂಚಣಿ ವಿಭಾಗದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅತ್ಯಂತ ಸರಳ ಸ್ವಭಾವದ ಸುಶ್ಮಿತಾ ಅವರ ಈ ದುಡುಕಿನ ನಿರ್ಧಾರ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದೆ.
Kshetra Samachara
25/07/2022 12:18 pm