ಕಡ್ತಲ:ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿಯ ಹಳೆ ವಿದ್ಯಾರ್ಥಿ ಬೆಂಗಳೂರಿನ ಉದ್ಯಮಿ ಪಾಂಡುರಂಗ ನಾಯಕ್ ಹಾಗೂ ಪುರಂದರ ನಾಯಕ್ ಸಹೋದರರು ಕಡ್ತಲ ಶಾಲೆಯ ಮಕ್ಕಳಿಗೆ ಉಚಿತವಾಗಿ ನೀಡುವ ಸ್ಕೂಲ್ ಬ್ಯಾಗ್ ವಿತರಣಾ ಸಮಾರಂಭ ನಡೆಯಿತು.
ಶಾಲೆಯ ಹಳೆ ವಿದ್ಯಾರ್ಥಿ ರವೀಂದ್ರ ನಾಯಕ್ ಅವರ ಶಾಲಾ ದಿನಗಳನ್ನು ನೆನಪಿಸಿಕೊಂಡರು. ಡಾ. ಪ್ರಮೋದ್ ಕುಮಾರ್‌ರವರು ದಾನಿಗಳ ಬಗ್ಗೆ, ಹಾಗೂ ಶಾಲಾ ಪರಿಸರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಶಾಂತ ಮಾತನಾಡಿ ಇಂತಹ ಕೊಡುಗೆಗಳು ಈ ಮಕ್ಕಳಿಗೆ ಸದಾ ಪ್ರೇರಣೆ, ಸ್ಫೂರ್ತಿಯಾಗಲಿ ಎಂದು ಹಾರೈಸಿದರು.
ಈ ಶಾಲೆಯ ಶಿಕ್ಷಕರ ಬಗ್ಗೆ ಇಲ್ಲಿ ಸಿಗುವ ಮೌಲ್ಯಯುಕ್ತ ಶಿಕ್ಷಣದ ಬಗ್ಗೆ ಮಾತನಾಡಿದ ಮೋಹನ್‌ದಾಸ್ ನಾಯಕ್ ಶಾಲೆಗೆ ಹಾಗೂ ದಾನಿಗಳಿಗೆ ಶುಭ ಹಾರೈಸಿದರು.
ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ನಾಯಕ್ ಮಾತನಾಡಿ ಬಡ, ಮದ್ಯಮ ವರ್ಗದ ಮಕ್ಕಳಿಂದ ಹಾಗೂ ಪೋಷಕರಿಂದ ಜೊತೆಗೆ ಊರಿನ ದಾನಿಗಳಿಂದ ಸರಕಾರಿ ಶಾಲೆಗಳು ಉಳಿದುಕೊಂಡಿದೆ. ಪ್ರತೀ ವರ್ಷ ನೀಡುವ ಈ ಕೊಡುಗೆ ಸದಾ ಅಭಿನಂದನಾ ಅರ್ಹವಾದದ್ದು. ದಾನಿಗಳ ಸಹಕಾರ ನಮ್ಮ ಶಾಲೆಗೆ ಸದಾ ಹೀಗೆ ಹರಿದು ಬರಲಿ ಎಂದು ಸಂತಸ ವ್ಯಕ್ತಪಡಿಸಿದರು.
ನಾಟಿ ವೈದ್ಯ ರವೀಂದ್ರ ನಾಯಕ್ ಕಡ್ತಲ, ಡಾ. ಪ್ರಮೋದ್ ಕುಮಾರ್, ಗ್ರಾಮಕರಣಿಕ ಪ್ರಶಾಂತ, ಪೊಲೀಸ್ ಸಿಬ್ಬಂದಿ ಕೃಷ್ಣ ಪೂಜಾರಿ, ಅರಣ್ಯ ಅಧಿಕಾರಿ ಮಂಜುನಾಥ, ನಿವೃತ್ತ ಪೋಸ್ಟ್ ಮಾಸ್ಟರ್ ಮೋಹನ್ ದಾಸ್ ನಾಯಕ್, ದಾನಿಗಳಾದ ಪುರಂದರ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Kshetra Samachara
21/07/2022 05:31 pm