ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಬಂಗಾಲಪದವಿನಲ್ಲಿ ಸ್ಮಶಾನ ನಿರ್ಮಾಣ : ಸ್ಥಳೀಯ ಕೆಲವರಿಂದ ವಿರೋಧ

ಮೂಡುಬಿದಿರೆ: ಕಲ್ಲಬೆಟ್ಟು ಗ್ರಾಮದ ಬಂಗಾಲಪದವು ಎಂಬಲ್ಲಿ ಪುರಸಭೆಯ ವತಿಯಿಂದ ನಿರ್ಮಾಣಗೊಳ್ಳಲಿರುವ ಸಾರ್ವಜನಿಕ ಸ್ಮಶಾನಕ್ಕೆ ಸ್ಥಳೀಯ ಕೆಲವು ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

2000 ಇಸವಿಯಲ್ಲಿ ಬಂಗಾಲಪದವಿನಲ್ಲಿ ಸ್ಮಶಾನಕ್ಕೆಂದು ಜಾಗ ಗುರುತಿಸಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಸ್ಮಶಾನಕ್ಕೆ ಸ್ಥಳೀಯರಿಂದ ವಿರೋಧ ಕಂಡು ಬಂದಿರುವುದರಿಂದ ಪುರಸಭೆ ಅಧಿಕಾರಿಗಳು, ಗ್ರಾಮಕರಣಿಕರು ಮಂಗಳವಾರ ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರ ಜತೆ ಮಾತುಕತೆ ನಡೆಸಿದರು. 20 ವರ್ಷಗಳ ಹಿಂದೆಯೆ ಇಲ್ಲಿ ಸ್ಮಶಾನಕ್ಕೆ ಕಂದಾಯ ಇಲಾಖೆ ಜಾಗ ಕಾದಿರಿಸಿತ್ತು. ಸಾರ್ವಜನಿಕರ ಅನುಕೂಲಕ್ಕಾಗಿ ಸ್ಮಶಾನಕ್ಕೆ ಅವಕಾಶ ನೀಡಬೇಕೆಂದು ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್ ಸ್ಥಳೀಯರಲ್ಲಿ ಮನವಿ ಮಾಡಿದರು. ಆದರೆ ಸ್ಥಳೀಯರು ಇದಕ್ಕೆ ಒಪ್ಪಲಿಲ್ಲ. ಇಲ್ಲಿ ನಾಗಬನವಿದೆ, ದೈವದ ಕಟ್ಟೆ ಕೂಡ ಇರುವುದರಿಂದ ಸ್ಮಶಾನ ನಿರ್ಮಿಸುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸ್ಥಳೀಯ ಕೆಲವು ಜನರು ಪಟ್ಟು ಹಿಡಿದರು. ಹೀಗಾಗಿ ಪುರಸಭೆಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗಲಿಲ್ಲ. ಸ್ಥಳೀಯರೊಂದಿಗೆ ಮುಂದಿನ ದಿನದಲ್ಲಿ ಇನ್ನೊಂದು ಸುತ್ತಿನ ಮಾತುಕತೆ ನಡೆಸಲು ತೀರ್ಮಾನಿಸಿ ಅಧಿಕಾರಿಗಳು ಅಲ್ಲಿಂದ ವಾಪಾಸಾದರು.

ಪುರಸಭೆ ಮುಖ್ಯಾಧಿಕಾರಿ ಇಂದು, ಉಪಾಧ್ಯಕ್ಷೆ ಸುಜಾತ ಶಶಿಧರ್, ಸದಸ್ಯರಾದ ಜೊಸ್ಸಿ ಮಿನೇಜಸ್, ಸುರೇಶ್ ಕೋಟ್ಯಾನ್, ಕಲ್ಲಬೆಟ್ಟು ಗ್ರಾಮಕರಣಿಕೆ ಭವ್ಯಾ ಹಾಗೂ ಗ್ರಾಮಸ್ಥರು ಹಾಜರಿದ್ದರು.

ಬಂಗಾಲಪದವುನಲ್ಲಿ ೨೦ ವರ್ಷಗಳ ಹಿಂದೆಯೆ ಕಂದಾಯ ಇಲಾಖೆ ಸ್ಮಶಾನಕ್ಕೆ ಜಾಗ ಗುರುತಿಸಿ ಸೂಕ್ತ ದಾಖಲೆಗಳೊಂದಿಗೆ ಪುರಸಭೆಗೆ ಹಸ್ತಾಂತರಿಸಿತ್ತು. ಆ ಸಂದರ್ಭದಲ್ಲಿ ಇಲ್ಲಿ ಮೂರು ಕುಟುಂಬಗಳು ಮಾತ್ರ ವಾಸವಾಗಿದ್ದವು. 2022ರಲ್ಲಿ ಸ್ಮಶಾನ ನಿರ್ಮಿಸಲು ಪುರಸಭೆ ಹೊರಟಾಗ ಇಲ್ಲಿ ಮನೆಗಳ ಸಂಖ್ಯೆ ಸುಮಾರು ೫೦ಕ್ಕೂ ಹೆಚ್ಚಿರುವುದು ಕಂಡುಬಂದಿದೆ. ದಲಿತ ಸಮುದಾಯಕ್ಕೆ ಸೇರಿದ ಕುಟುಂಬಗಳೆ ಹೆಚ್ಚು. ಪುರಸಭೆಯ ವಿಳಂಬ ಧೋರಣೆಯಿಂದಾಗಿ ಸ್ಮಶಾನ ನಿರ್ಮಾಣಕ್ಕೆ ತೊಂದರೆ ಎದುರಾಗಿದೆ ಎನ್ನಲಾಗಿದೆ.

Edited By : PublicNext Desk
Kshetra Samachara

Kshetra Samachara

08/07/2022 05:19 pm

Cinque Terre

3.09 K

Cinque Terre

0

ಸಂಬಂಧಿತ ಸುದ್ದಿ