ಮುಲ್ಕಿ:ರಾಷ್ತ್ರೀಯ ಹೆದ್ದಾರಿ 66ರ ಹಳೆಯಂಗಡಿ ಸಮೀಪದ ಮುಕ್ಕದ ಜಂಕ್ಷನ್ ಬಳಿ ಕಳೆದ ಎರಡು ದಿನಗಳಿಂದ ಗ್ಯಾಸ್ ನ ದುರ್ವಾಸನೆ ಕಂಡು ಬಂದಿದೆ.
ಯಾವುದೋ ಕೆಮಿಕಲ್ ಕಂಪೆನಿಯವರು ಉಪಯೋಗಿಸಿದ ಕೆಮಿಕಲ್ ಡ್ರಮ್ ಗಳನ್ನು ಗುಜರಿಯವರಿಗೆ ನೀಡಿದ್ದು ಅದನ್ನು ಅವರು ಮುಕ್ಕದಲ್ಲಿ ಹೆದ್ದಾರಿಯ ಬದಿಯಲ್ಲಿ ಚಟ್ಟಿ(ಕಟ್ಟಡ ಕಾಮಗಾರಿಗೆ ಸಿಮೆಂಟ್ ಹಾಕಲು ಅಗಲವಾದ ಪಾತ್ರೆ) ತಯಾರಿಸುವವ ಕಾರ್ಮಿಕರಿಗೆ ನೀಡಿದ್ದಾರೆ.
ಆದರೆ ಚಟ್ಟಿ ತಯಾರಿಸುವ ಕಾರ್ಮಿಕರು ಸ್ಟಾಕ್ ಇಟ್ಟಿರುವ ಡ್ರಮ್ ನಲ್ಲಿದ್ದ ಕೆಮಿಕಲ್ ನ ದುರ್ವಾಸನೆ ಮುಕ್ಕ ಪರಿಸರದಲ್ಲಿ ಹರಡಿದ್ದು ವಾಹನ ಸಂಚಾರ ಸಂದರ್ಭದಲ್ಲಿ ಮೂಗಿಗೆ ಬಡಿಯುತ್ತಿದೆ ಎಂಬ ಸ್ಥಳೀಯರ ಆರೋಪದ ಮೇಲೆ ಪರಿಶೀಲನೆ ನಡೆಸಿದಾಗ ಹೆದ್ದಾರಿ ಬದಿಯಲ್ಲಿ ಚಟ್ಟಿ ತಯಾರಿಸುವ ಕಾರ್ಮಿಕರ ಬಳಿ ಹಲವಾರು ಡ್ರಮ್ ಗಳಿರುವುದು ಕಂಡು ಬಂದಿದೆ.
ಗುಜರಿ ಕಂಪೆನಿಯವರಿಂದ ಕಾರ್ಮಿಕರು ಚಟ್ಟಿ ತಯಾರಿಸಲು ಪಡೆದಿದ್ದಾರೆ.ಡ್ರಮ್ ನೊಳಗೆ ಉಳಿದಿರುವ ಕೆಮಿಕಲ್ ಅತೀ ಅಪಾಯಕಾರಿಯಾಗಿದ್ದು, ದಿನ ಬಳಕೆಯ ಅಡುಗೆ ಸಿಲಿಂಡರ್ ಅನಿಲ ರೀತಿ ವಾಸನೆ ಬರುತ್ತಿದೆ.
ಡ್ರಮ್ ನಲ್ಲಿದ್ದ ಕೆಮಿಕಲ್ ನೆಲಕ್ಕೆ ಚೆಲ್ಲಿ ಮಳೆ ನೀರಿನೊಂದಿಗೆ ಪರಿಸರದಲ್ಲಿ ಹರಡಿದೆ.ಇದರಿಂದ ಪರಿಸರದ ಬಾವಿಗಳ ನೀರು ಮಲಿನವಾಗುವ ಸಾಧ್ಯತೆಯಿದೆ.
ಕೂಡಲೇ ಕೆಮಿಕಲ್ ಡ್ರಮ್ ಗೆ ಸಂಬಂಧಪಟ್ಟವರು ಡ್ರಮ್ ಗಳನ್ನು ತೆರವು ಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
Kshetra Samachara
17/06/2022 08:13 am