ಬಜಪೆ: ಯುವಜನರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಸ್ವ-ಉದ್ಯೋಗದ ಮೂಲಕ ವಿಶಿಷ್ಟ ಸಾಧನೆ ಮಾಡಿದರೆ ನಿರುದ್ಯೋಗ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು ಎಂದು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನೂತನ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಅವರು ಹೇಳಿದರು.
ಅವರು ಎಡಪದವು ಹಾಲು ಉತ್ಪಾದಕರ ಸಂಘ, ಎಡಪದವು ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಮತ್ತು ಎಡಪದವು ಗ್ರಾಮ ಪಂಚಾಯತ್ ವತಿಯಿಂದ ಎಡಪದವು ಪಂಚಾಯತ್ ಸಭಾ ಭವನದಲ್ಲಿ ನಡೆದ ಸನ್ಮಾನ ಕಾರ್ಯಕ್ರಮವನ್ನು ಸ್ವೀಕರಿಸಿ ಮಾತನಾಡಿದರು.ಹಾಲು ಉತ್ಪಾದಕರು, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರ ಮಕ್ಕಳ ಶಿಕ್ಷಣಕ್ಕೆ ನೆರವು ಹಾಗೂ ಹೈನುಗಾರರಿಗೆ ವಿಮೆ ಯೋಜನೆಗಳ ಬಗ್ಗೆ ಒಕ್ಕೂಟ ಈಗಾಗಲೇ ಚರ್ಚಿಸಿದೆ ಎಂದು ಅವರು ಹೇಳಿದರು.
ಎಡಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ರಾವ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಸಂದರ್ಭ ಎಡಪದವು ಹಾಲು ಉತ್ಪಾದಕರ ಸಂಘದ ನಿರ್ದೇಶಕ ನೋಬರ್ಟ್ ಮಥಾಯಿಸ್ ,ಎಡಪದವು ವ್ಯವಸಾಯ ಸಹಕಾರಿ ಸಂಘ(ನಿ) ಅಧ್ಯಕ್ಷ ನೀಲಯ ಎಂ ಅಗರಿ ಎಡಪದವು ಗ್ರಾಮ ಪಂಚಾಯತ್ ಅಧ್ಯಕ್ಷ ಸುಕುಮಾರ ದೇವಾಡಿಗ, ಸಂಘದ ನಿರ್ದೇಶಕ ಮಾಧವ ದೇವಾಡಿಗ, ಲೋಲಾಕ್ಷ, ಫೆಡ್ರಿಕ್ ಸಿಕ್ವೇರ, ಆಲ್ವಿನ್ ಪಿಂಟೊ, ಫೆಲಿಕ್ಸ್ ಲೂಯಿಸ್, ಶಂಕರ ದೇವಾಡಿಗ, ಶಿವರಾಮ ಕಾರಂತ, ಪಂಚಾಯತ್ ಪಿಡಿಒ ರಾಜೀವಿ ಡಿ ನಾಯಕ್, ಪಂಚಾಯತ್ ಸದಸ್ಯರು, ಪಂಚಾಯತ್ ಕಾರ್ಯದರ್ಶಿ ಇಸ್ಮಾಯಿಲ್, ಸಿಬ್ಬಂದಿ ವರ್ಗ, ಸಹಕಾರಿ ಬ್ಯಾಂಕ್ ನಿರ್ದೇಶಕರು, ಸದಸ್ಯರು, ಹಾಲು ಉತ್ಪಾದಕರ ಸಂಘದ ಸದಸ್ಯರು, ಗ್ರಾಮಸ್ಥರು ಹಾಗೂ ಮಂಗಳೂರಿನ ಶ್ರೀ ಗೋಕರ್ಣನಾಥೇಶ್ವರ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ(ಎನ್ನೆಸ್ಸೆಸ್) ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Kshetra Samachara
08/06/2022 10:24 am