ಕುಂದಾಪುರ: ಫ್ರೆಂಡ್ಸ್ ಅಚ್ಲಾಡಿ ಸಂಸ್ಥೆ ವತಿಯಿಂದ ಸನ್ ಶೈನ್ ಕ್ರೀಡಾಂಗಣದಲ್ಲಿ ನಡೆದ ಅಚ್ಲಾಡಿ ಪ್ರೀಮಿಯರ್ ಲೀಗ್ 'ಗೋಪ' ಟ್ರೋಫಿ ಕ್ರಿಕೆಟ್ ಪಂದ್ಯಾಟದ ಉಳಿಕೆ ಹಣದಲ್ಲಿ ಮೂವತ್ತು ಸಾವಿರ ರೂಪಾಯಿಯನ್ನು ಕ್ಯಾನ್ಸರ್ ನಿಂದ ನಿಧನ ಹೊಂದಿದ ಅಚ್ಲಾಡಿ ಗೋಪಾಲ ಮರಕಾಲ ಕುಟುಂಬಸ್ಥರಿಗೆ ಪರಿಹಾರವಾಗಿ ನೀಡಲಾಯಿತು. ಹಾಗೇ ಇಪತ್ತು ಸಾವಿರ ರೂಪಾಯಿಗಳನ್ನು ಮನೆಯ ಮೇಲ್ಛಾವಣಿ ಕುಸಿದು ಬಿದ್ದು ಗಾಯಗೊಂಡ ಚೇತನ್ ಪೂಜಾರಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಫ್ರೆಂಡ್ಸ್ ಅಚ್ಲಾಡಿ ಅಧ್ಯಕ್ಷ ಅಜಿತ್ ಶೆಟ್ಟಿ ಕೊತ್ತಾಡಿ, ವಡ್ಡರ್ಸೆ ಗ್ರಾಮ ಪಂಚಾಯತ್ ಸದಸ್ಯ ಚಂದ್ರಶೇಖರ ಶೆಟ್ಟಿ, ಯೋಗೀಶ್ ಅಚ್ಲಾಡಿ, ಕಿಶನ್ ಶೆಟ್ಟಿ, ರಾಕೇಶ್ ಶೆಟ್ಟಿ, ಸುಶಾಂತ್ ಶೆಟ್ಟಿ, ರಾಜೇಶ್ ಗಾಣಿಗ ಇನ್ನಿತರರು ಉಪಸ್ಥಿತರಿದ್ದರು.
Kshetra Samachara
05/05/2022 08:08 am