ಕಟೀಲು :ಮಲ್ಲಿಗೆಯಂಗಡಿಯ ಪಡು ಸಾಂತ್ಯ ಭಂಡಾರಿ ಮನೆತನದ ನಾಗಬನದಲ್ಲಿ ಸುಮಾರು 6 ನಾಗನ ಕಲ್ಲುಗಳನ್ನು ಪ್ರತಿಷ್ಠೆ ಮಾಡಿದ ಜಾಗದಿಂದ ಬೇರೆ ಬೇರೆ ಜಾಗದಲ್ಲಿ ಎಸೆದು ವಿಕೃತ ಮೆರೆದ ಘಟನೆ ರವಿವಾರ ನಡೆದಿದೆ. ರವಿವಾರ ಬೆಳಿಗ್ಗೆ ಭಂಡಾರಿ ಮನೆತನದ ವ್ಯಕ್ತಿಯೊಬ್ಬರು ನೋಡಿದಾಗ ನಾಗನ ಕಲ್ಲು ಅವರಣದಿಂದ ಹೊರಗೆ ಬಿದ್ದದನ್ನು ಗಮನಿಸಿ ಪರಿಶೀಲನೆ ನಡೆಸಿದಾಗ ನಾಗಬನದಲ್ಲಿನ ಪ್ರತಿಷ್ಠೆ ಮಾಡಿದ ಜಾಗದಿಂದ 6 ನಾಗನ ಕಲ್ಲುಗಳನ್ನು ಎಸೆದು ಬೇರೆ ಬೇರೆ ಜಾಗದಲ್ಲಿ ಬಿಸಾಡಲಾಗಿದೆ.
ಬಿಜೆಪಿ ನಾಯಕ ಈಶ್ವರ್ ಕಟೀಲು ಮಾತನಾಡಿ ತುಳುನಾಡಿನಾಡಿಲ್ಲಿ ನಾವು ಆರಾಧಿಸಿಕೊಂಡು ಬಂದಿರುವ ನಾಗ ಕ್ಷೇತ್ರಗಳನ್ನು ಅಪವಿತ್ರ ಹಾಳು ಮಾಡಿರುವುದು ತುಂಬಾ ವಿಷಾದನೀಯವಾಗಿದ್ದು ಕೂಡಲೇ ತಪ್ಪಿತಸ್ತರನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಹೇಳಿದರು. ಭಂಡಾರಿ ಮನೆತನದ ಪುಷಾ ಕರುಣಾಕರ ಭಂಡಾರಿ , ಸುಂದರ ಭಂಡಾರಿ ಉಪಸ್ಥಿತರಿದ್ದು ಸ್ಥಳಕ್ಕೆ ಎಸಿಪಿ ಮಹೇಶ್ ಕುಮಾರ್ ಹಾಗೂ ಪೋಲಿಸರ ತಂಡ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಾಗಿದೆ.
Kshetra Samachara
01/05/2022 06:38 pm