ಬಂಟ್ವಾಳ: 108 ಆ್ಯಂಬುಲೆನ್ಸ್ ನಲ್ಲಿ ಫರಂಗಿಪೇಟೆ ಸಮೀಪ ಕಣ್ಣೂರು ಎಂಬಲ್ಲಿ ಹೆರಿಗೆಯಾಗಿದೆ. ವೇಣೂರು ನಿವಾಸಿ ರಮೇಶ್ ಅವರ ಪತ್ನಿ ಗೌರಮ್ಮ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ.
ಎರಡನೇ ಹೆರಿಗೆಗೆಂದು ಅವರು ಬೆಳ್ತಂಗಡಿಯಿಂದ ಒಮ್ನಿ ಕಾರಿನಲ್ಲಿ ಪುಂಜಾಲಕಟ್ಟೆ ವರೆಗೆಬಂದಿದ್ದು ಅಬಳಿಕ 108 ಆ್ಯಂಬುಲೆನ್ಸ್ ಮೂಲಕ ಮಂಗಳೂರು ಲೇಡಿಗೋಶನ್ ಆಸ್ಪತ್ರೆಗೆ ದಾಖಲಿಸಲು ಹೋಗುತ್ತಿದ್ದಂತೆ ದಾರಿ ಮಧ್ಯೆ ಕಣ್ಣೂರು ಎಂಬಲ್ಲಿ ನೋವು ಹೆಚ್ಚಾಗಿ ಹೆರಿಗೆಯಾಗಿದೆ. ಉಮೇಶ್ ಶೆಟ್ಟಿ ಅವರ ನೇತೃತ್ವದ ಲ್ಲಿ ಹೆರಿಗೆ ಮಾಡಲಾಯಿತು.ತಾಯಿ ಮಗುವನ್ನು ಮಂಗಳೂರು ಲೇಡಿಗೋಶನ್ ಆಸ್ಪತ್ರೆಗೆ ಸೇರಿಸಲಾಗಿದ್ದು ತಾಯಿ ಮಗು ಆರೋಗ್ಯದಿಂದ ಇದ್ದಾರೆ. ಚಾಲಕ ಜಗನ್ನಾಥ ಶೆಟ್ಟಿ ಅವರು ಸಹಕಾರ ನೀಡಿದರು.
Kshetra Samachara
09/04/2022 05:59 pm