ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಅಟಲ್ ಭೂಜಲ ಜಾಗೃತಿ ಸಪ್ತಾಹಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ವಿಶ್ವ ಜಲ ದಿನದ ಅಂಗವಾಗಿ ಕಾರ್ಯಕ್ರಮ ನಡೆಯಿತು.
ಅಧ್ಯಾಪಕ ಸುಮಂತ್ ಆಳ್ವ ಎಮ್, ಸುಸ್ಥಿರ ಅಂತರ್ಜಲ ನಿರ್ವಹಣೆಯಲ್ಲಿ ಸಮುದಾಯದ ಸಹಭಾಗಿತ್ವ ವಿಷಯದ ಬಗ್ಗೆ ಮಾಹಿತಿ ನೀಡಿದರು. ವಿದ್ಯಾರ್ಥಿಗಳ ಮನೆಯಲ್ಲಿಯೂ ಮಳೆನೀರು ಕೊಯ್ಲು, ಬದು ನಿರ್ಮಾಣ, ಅಂತರ್ಜಲ ಮರುಪೂರಣಕ್ಕೆ ನರೇಗಾದ ಮೂಲಕ ಸಿಗುವ ಅನುದಾನದ ಮಾಹಿತಿ ನೀಡುವ ಮೂಲಕ ಮಳೆ ನೀರು ಸಂರಕ್ಷಣೆಯನ್ನು ಮಾಡುವಂತೆ ತಿಳಿಸಲಾಯಿತು.
ಭಗೀರಥ ಗಂಗೆಯನ್ನು ಭೂಮಿಗೆ ಹರಿಸಿದ ಪುರಾಣ ಕಥೆಯನ್ನು ಮುಖ್ಯೋಪಾಧ್ಯಾಯ ರವಿರಾಜ್ ಕಣಂತೂರು ತಿಳಿಸಿದರು.
ವಿದ್ಯಾರ್ಥಿ ನಾಯಕ ಪ್ರಣಾಮ್ ವಾಟರ್ ಬೆಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿಜ್ಞಾನ ಅಧ್ಯಾಪಕರಾದ ರಮ್ಯ ಜೆ ಪ್ರಾತ್ಯಕ್ಷಿಕೆಯನ್ನು ತೋರಿಸಿಕೊಟ್ಟರು. 6ನೇ ತರಗತಿಯ ವಿದ್ಯಾರ್ಥಿಗಳು ನೀರಿನ ಕುರಿತು ಹಾಡು ಹಾಡಿದರು.
ಒಂದು ವಾರಗಳ ಕಾಲ ವಾಟರ್ ಬೆಲ್, ನೀರಿನ ಜಾಗೃತಿಯ ಕುರಿತು ಕಿರು ನಾಟಕ ಪ್ರದರ್ಶನ ನಡೆಯಲಿದೆ. ನೀರಿನ ಸಂರಕ್ಷಣೆಯ ಕುರಿತು ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಮನೆಯಲ್ಲಿ ನೀರಿನ ಸಧ್ಭಳಕೆಯ ಭಾವಚಿತ್ರ ಸಂಗ್ರಹ ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಶಾಲೆಯಲ್ಲಿ ವಿದ್ಯಾಕೇಂದ್ರದ ಸಹಯೋಗದೊಂದಿಗೆ ಮುಂದಿನ ದಿನಗಳಲ್ಲಿ ಮಳೆಕೊಯ್ಲು ಹಾಗೂ ಕೃಷಿ ಹೊಂಡ ಮತ್ತು ನೀರಿನ ಘಟಕವನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ವಿಜ್ಞಾನ ಅಧ್ಯಾಪಕರಾದ ರಾಜೇಶ್ವರಿ, ರಮ್ಯ, ಜ್ಯೋತಿಶ್ರೀ ಸಿ. ಎಮ್, ದಿವ್ಯ, ನಿವೇದಿತಾ, ಗುಣಶ್ರೀ ಹಾಗೂ ಸಂಸ್ಕೃತ ಅಧ್ಯಾಪಕರಾದ ಅನ್ನಪೂರ್ಣ ಎನ್ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಧ್ಯಾಪಕರಾದ ಬಾಲಕೃಷ್ಣ ನಿರೂಪಿಸಿದರು.
Kshetra Samachara
22/03/2022 04:10 pm