ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅದ್ಯಪಾಡಿ:ಶ್ರೀ ಆದಿನಾಥೇಶ್ವರ ದೇವಸ್ಥಾನದಲ್ಲಿ ಹಗಲು ರಥೋತ್ಸವ

ಬಜಪೆ: ಬಜಪೆ ಸಮೀಪದ ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಪ್ರಯುಕ್ತ ಮಂಗಳವಾರದಂದು ಹಗಲು ರಥೋತ್ಸವ ಜರಗಿತು.

ಅದ್ಯಪಾಡಿ ಶ್ರೀ ಆದಿನಾಥೇಶ್ವರ ದೇವಸ್ಥಾನಕ್ಕೆ 700 ವರ್ಷಕ್ಕೂ ಅಧಿಕ ಹಿಂದಿನ ಇತಿಹಾಸವಿದೆ. ರೋಗ ನಿವಾರಕ, ಆರೋಗ್ಯ, ಜ್ಞಾನಪ್ರದಾಯಕ ಸನ್ನಿಧಾನವನ್ನು ಹೊಂದಿದೆ. ಇಲ್ಲಿನ ದೇವರ ಗಂಧ ಪ್ರಸಾದ ಉಬ್ಬಸ ರೋಗಕ್ಕೆ ದಿವ್ಯಾ ಔಷಧ, ಹಲವಾರು ಊರುಗಳಿಂದ ಅನೇಕ ಭಕ್ತಾದಿಗಳು ಉಬ್ಬಸ ನಿವಾರಣೆಗೆ ಹರಕೆ ಕಟ್ಟಿಕೊಳ್ಳುತ್ತಾರೆ. ಇಲ್ಲಿಯ ಪ್ರಸಾದ ಹಾಗೂ ಹಲವು ದಿನ ಶುದ್ಧಾಚಾರ, ಪಥ್ಯಾಹಾರದಿಂದ ಉಬ್ಬಸದಿಂದ ಮುಕ್ತಿ ಪಡೆದುಕೊಂಡ ಅನೇಕ ಜನರು ಜಿಲ್ಲೆಯಲ್ಲಿ ಇದ್ದಾರೆ.

Edited By : PublicNext Desk
Kshetra Samachara

Kshetra Samachara

09/03/2022 03:14 pm

Cinque Terre

1.34 K

Cinque Terre

0

ಸಂಬಂಧಿತ ಸುದ್ದಿ