ನೆಲ್ಯಾಡಿ: 4 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇಚ್ಲಂಪಾಡಿ ಗ್ರಾಮದ ಲಾವತ್ತಡ್ಕ ರುದ್ರಮಜಲು ನಿವಾಸಿ ನಂದಕುಮಾರ್(19) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜ.27ರಂದು ಸಂಜೆ ನಿಧನರಾದರು.
ನೆಲ್ಯಾಡಿಯ ಕಾಲೇಜಿನಲ್ಲಿ ಪ್ರಥಮ ಬಿ.ಕಾಂ. ವಿದ್ಯಾಥಿಯಾಗಿದ್ದ ನಂದಕುಮಾರ್ 4 ವರ್ಷಗಳಿಂದಲೂ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ದಿಢೀರ್ ತೀವ್ರ ಅನಾರೋಗ್ಯಕ್ಕೆ ತುತ್ತಾದ ನಂದಕುಮಾರ್ ಅವರನ್ನು ಜ. 26ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಜ.27ರಂದು ಅಸುನೀಗಿದರು. ನಂದಕುಮಾರ್ ಅವರು ತಂದೆ ಸುರೇಂದ್ರ ಕುಮಾರ್, ತಾಯಿ ಬಿಂದು, ಸಹೋದರ ನಿಖಿಲ್ ಕುಮಾರ್ ಅವರನ್ನು ಅಗಲಿದ್ದಾರೆ.
Kshetra Samachara
28/01/2022 06:22 pm