ಬೈಕಂಪಾಡಿ:ಬೈಕಂಪಾಡಿ ಕಂಪನಿಯೊಂದರಲ್ಲಿ ಅಮೋನಿಯಾ ಸೋರಿಕೆಯಿಂದ ಅಸ್ವಸ್ಥರಾದ 26 ಮಂದಿ ಕಾರ್ಮಿಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಡಾ. ಭರತ್ ಶೆಟ್ಟಿ ವೈ ಅವರು
ಭೇಟಿ ನೀಡಿ ಕಾರ್ಮಿಕ ವರ್ಗದವರ ಆರೋಗ್ಯ ವಿಚಾರಿಸಿದರು.ವೈದ್ಯರಾದ ಡಾ.ಡೇವಿಡ್,ತಾಲೂಕು ಆರೋಗ್ಯಾಧಿಕಾರಿ ಡಾ.ಸುಜಯ್
ಮಾತುಕತೆ ನಡೆಸಿ ಚಿಕಿತ್ಸೆಗೆ ಸಂಬಂಧಪಟ್ಟಂತೆ ಮಾಹಿತಿಯನ್ನು ಪಡೆದುಕೊಂಡರು.ಈ ಸಂದರ್ಭ ಬಿಜೆಪಿ ಮಂಡಲ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ,ರಾಜೇಶ್ ಮುಕ್ಕ,ಯೋಗೀಶ್ ಶೆಟ್ಟಿ ಜೆಪ್ಪು ಉಪಸ್ಥಿತರಿದ್ದರು.
Kshetra Samachara
11/01/2022 08:23 pm