ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊರಗಜ್ಜ ವೇಷ ಧರಿಸಿ ಸಮಾಜದಲ್ಲಿ ಅಶಾಂತಿ: ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಕ್ರಮಕ್ಕೆ ಒತ್ತಾಯ

ಬಂಟ್ವಾಳ: ಕೊರಗಜ್ಜನ ವೇಷ ಧರಿಸಿ ಸಮಾಜದಲ್ಲಿ ಅಶಾಂತಿ ಉಂಟು ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಂಟ್ವಾಳ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ ವಿಟ್ಲ ಆರಕ್ಷಕ ಪೊಲೀಸ್ ನಿರೀಕ್ಷಕರಲ್ಲಿ ಒತ್ತಾಯಿಸಿದೆ.

ಈ ಕುರಿತು ಸಂಚಾಲಕ ರಾಜಾ ಚಂಡ್ತಿಮಾರ್, ಪ್ರಮುಖರಾದ ರಾಮಣ್ಣ ವಿಟ್ಲ, ತುಳಸೀದಾಸ್ ವಿಟ್ಲ ಮತ್ತಿತರರು ವಿಟ್ಲ ಠಾಣಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು. ಇಂಥ ಕೃತ್ಯದಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಧರ್ಮ, ಧರ್ಮದ ಮಧ್ಯೆ ವೈಷಮ್ಯ ಉಂಟುಮಾಡುವ ಸಾಧ್ಯೆ ಇರುತ್ತದೆ.

ಈ ರೀತಿಯಾಗಿ ಸಮಾಜದಲ್ಲಿ ಅಶಾಂತಿ ಉಂಟುಮಾಡಲು ಕಾರಣರಾದ ಮದುಮಗ ಉಮರುಳ್ಳ ಬಾಷಿತ್ ಮತ್ತು ಆತನ ಸಂಗಡಿಗರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು, ಇಂಥ ಘಟನೆಗಳನ್ನು ಬಳಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುವ ಶಕ್ತಿಗಳ ವಿರುದ್ಧವೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

08/01/2022 11:46 am

Cinque Terre

2.43 K

Cinque Terre

0

ಸಂಬಂಧಿತ ಸುದ್ದಿ