ಮೂಡುಬಿದಿರೆ :ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗಾಗಿ ರಾಜ್ಯಮಟ್ಟದಲ್ಲಿ ನಡೆದ ಪರೀಕ್ಷೆಗೆ ಮೂಡುಬಿದಿರೆಯ ಕೇಂದ್ರದಲ್ಲಿ ಭಾನುವಾರ ದಾಖಲೆಯ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿ ಗಮನ ಸೆಳೆದಿದ್ದಾರೆ.
ರಾಜ್ಯಮಟ್ಟದಲ್ಲಿ ಮೂರೂವರೆ ಲಕ್ಷಕ್ಕೂ ಹೆಚ್ಚಿನ ಅಭ್ಯರ್ಥಿಗಳು ಈ ಬಾರಿ ಪರೀಕ್ಷೆಗೆ ಹಾಜರಾಗುತ್ತಿದ್ದು, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಏಕೈಕ ಕೇಂದ್ರವಾಗಿದ್ದ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದರಲ್ಲೇ
13000 ಮಂದಿ ಪರೀಕ್ಷೆಗೆ ಹಾಜರಾಗಿ ಗಮನ ಸೆಳೆದರು .
ಮಂಗಳೂರು ಕಮಿಷನರ್ ಶಶಿಕುಮಾರ್ ಸೇರಿದಂತೆ ಉನ್ನತ ಪೊಲೀಸ್ ಅಧಿಕಾರಿಗಳು ಸೇರಿದಂತೆ ಸುಮಾರು ಆರು ನೂರರಷ್ಟು ಪೊಲೀಸ್ ಅಧಿಕಾರಿಗಳು ಸಿಬಂದಿಗಳು ಪರೀಕ್ಷೆಯ ಪರೀಕ್ಷೆಯ ಪ್ರಕ್ರಿಯೆಯಲ್ಲಿ ಸಹಕರಿಸಿದರು.
ಈ ಪರೀಕ್ಷೆಗಾಗಿ ಸುಮಾರು 700 ರಷ್ಟು ಕೊಠಡಿ ಪರಿವೀಕ್ಷಕರನ್ನು ಆಳ್ವಾಸ್ ಸಂಸ್ಥೆ ಒದಗಿಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವಲ್ಲಿ ಕೊಡುಗೆ ನೀಡಿದೆ
ಆಳ್ವಾಸ್ ಶಿಕ್ಷಣ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಪೊಲೀಸ್ ಇಲಾಖೆಯ ಪರೀಕ್ಷೆಗಳಿಗೆ ಕೇಂದ್ರವಾಗಿ ಪರೀಕ್ಷೆಯ ಯಶಸ್ವಿ ನಿರ್ವಹಣೆಗೆ ಸಹಕಾರ ನೀಡುತ್ತಿದೆ. ಇಂದಿನ ಪರೀಕ್ಷೆಗೂ ಕೂಡ ಆಳ್ವಾಸ್ ಮತ್ತೆ ಸಹಕಾರ ನೀಡಿ ಪರೀಕ್ಷೆಯ ಯಶಸ್ವಿ ನಿರ್ವಹಣೆ
ಕಾರಣವಾಗಿದೆ.
- ಶಶಿಕುಮಾರ್ ಪೊಲೀಸ್ ಕಮಿಷನರ್ ಮಂಗಳೂರು .
Kshetra Samachara
25/10/2021 06:50 am