ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅ.24ರಂದು ಬಿ.ಸಿ.ರೋಡ್ ನಿಂದ ಡಿಸಿ ಕಚೇರಿಗೆ ಬೃಹತ್ ಕಾಲ್ನಡಿಗೆ ಜಾಥಾ

ಬಂಟ್ವಾಳ: ಬಿ.ಸಿ.ರೋಡಿನಿಂದ ದ.ಕ.ಜಿಲ್ಲಾಧಿಕಾರಿ ಕಚೇರಿಗೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬೃಹತ್ ಕಾಲ್ನಡಿಗೆ ಜಾಥಾ ಅಕ್ಟೋಬರ್ 24ರಂದು ನಡೆಯಲಿದೆ.

ಮೂಲಭೂತ ಸೌಕರ್ಯಗಳಲ್ಲಿ ಒಂದಾದ 'ರಸ್ತೆ ಸಂಪರ್ಕವನ್ನು ಪ. ಜಾತಿ | ಪಂಗಡದವರ ಮನೆಗಳಿರುವಲ್ಲಿಗೆ ಒದಗಿಸುವಂತೆ ಮತ್ತು ಇತರ ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಈ ಪ್ರತಿಭಟನೆ ನಡೆಯಲಿದೆ ಎಂದು ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಬಿ.ಕೆ.ಸೇಸಪ್ಪ ಬೆದ್ರಕಾಡು ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಮಂಗಳವಾರ ಸಂಜೆ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

24ರಂದು ಮಧ್ಯಾಹ್ನ 3 ಗಂಟೆಗೆ ಬಿ, ಸಿ, ರೋಡ್ನಿಂದ ಬೃಹತ್ ಕಾಲ್ನಾಡಿಗೆ ಜಾಥ ಹೊರಟು 25ರಂದು ಸರಕಾರವನ್ನು ಒತ್ತಾಯಿಸಿ ಕೂಡಲೇ ಪ. ಜಾತಿ ಪಂಗಡದವರ ಹಾಗೂ ಇತರ ಬಡವರ್ಗದವರ ಮೂಲಭೂತ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಮಾಡಲಾಗುತ್ತದೆ ಎಂದವರು ತಿಳಿಸಿದರು.

ರಸ್ತೆ ವಂಚಿತ ದ. ಕ. ಜಿಲ್ಲೆಯ ಪ. ಜಾತಿ / ಪಂಗಡದವರ ಮನೆ ಇರುವಲ್ಲಿಗೆ ರಸ್ತೆ ಸಂಪರ್ಕ ಒದಗಿಸುವಂತೆ ಆಯಾಯ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆ ಇಲ್ಲಿಗೆ ಬಂದಿರುವ ದೂರು ಅರ್ಜಿಗಳನ್ನು ಪರಿಶೀಲನೆ ಮಾಡಿ ತುರ್ತಾಗಿ ಕ್ರಮವಹಿಸಿ ರಸ್ತೆ ಸಂಪರ್ಕ ಒದಗಿಸುವುದು, ಇತರ ಬೇಡಿಕೆಗಳನ್ನು ಪೂರೈಸಬೇಕಾಗಿ ಅವರು ಒತ್ತಾಯಿಸಿದರು.

ರಸ್ತೆ ವಂಚಿತರಾಗಿರುವ 16 ಕಾಲನಿಗಳ ಹಾಗೂ ಕಾಂಕ್ರಿಟೀಕರಣ ಆಗಲು ಬಾಕಿ ಇರುವ ಕಾಲನಿಗಳ ಪಟ್ಟಿ ನೀಡಿದ ಅವರು, ಎಲ್ಲಾ ಬೇಡಿಕೆಗಳಿಗೆ ಸೂಕ್ತವಾದ ನ್ಯಾಯ ಒದಗಿಸದೆ ಇದ್ದಲ್ಲಿ ರಸ್ತೆ ವಂಚಿತರು, ಭೂವಂಚಿತ ನಿವೃತ್ತ ಸೈನಿಕರು ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ವಿಧಾನ ಸಭಾ ಚುನಾವಣೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಲು ನಿರ್ಧರಿಸಲಾಗುವುದು, ಅಲ್ಲದೆ ರಸ್ತೆ ವಂಚಿತರು ಮುಂದಕ್ಕೆ ಯಾವುದೇ ಕಾರಣಕ್ಕೂ ಆಯಾಯ ಗ್ರಾಮ ಪಂಚಾಯತ್ಗಳಿಗೆ ಮನೆ ತೆರಿಗೆ ಕಟ್ಟದಿರಲು ಕೂಡಾ ನಿರ್ಧರಿಸಲಾಗುವುದು.

ಜಿಲ್ಲಾಧಿಕಾರಿಗಳು ವಿಶೇಷವಾಗಿ ಕ್ರಮವಹಿಸುವ ಕಡತಗಳಿಗೆ ನ್ಯಾಯ ಒದಗಿಸಿ, ತಮ್ಮ ವ್ಯಾಪ್ತಿಗೆ ಬರದಿರುವ ಬೇಡಿಕೆಗಳನ್ನು ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದವರು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ ಗೌರವಾಧ್ಯಕ್ಷ ಸೋಮಪ್ಪ ನಾಯ್ಕ ಮಲ್ಯ, ಜಿಲ್ಲಾಧ್ಯಕ್ಷ ಚಂದ್ರಶೇಖರ ಯು.ವಿಟ್ಲ, ಸಂಚಾಲಕ ಗೋಪಾಲ ನೇರಳಕಟ್ಟೆ, ಗೌರವ ಸಲಹೆಗಾರ ಕುಶಾಲಪ್ಪ ಮೂಡಂಬೈಲು, ಪ್ರಮುಖರಾದ ಗಣೇಶ್ ಸೀಗೆಬಲ್ಲೆ, ಲಿಖಿತ್ ಕುಮಾರ್ ಎಸ್, ಸೋಮಪ್ಪ ನಾಯ್ಕ ಮಲ್ಯ ಮತ್ತಿತರರು ಇದ್ದರು.

Edited By : PublicNext Desk
Kshetra Samachara

Kshetra Samachara

19/10/2021 10:04 pm

Cinque Terre

6.88 K

Cinque Terre

0

ಸಂಬಂಧಿತ ಸುದ್ದಿ