ಬಂಟ್ವಾಳ: ಮಂಗಳವಾರದಿಂದೀಚೆಗೆ ಬಂಟ್ವಾಳ ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಬಂಟ್ವಾಳ ತಾಲೂಕಿನಲ್ಲಿ ಹಲವೆಡೆ ಗುಡ್ಡ ಜರಿತ, ತೋಟಗಳಿಗೆ ಹಾನಿಗಳಾಗಿವೆ. ಕಂದಾಯ ಇಲಾಖೆ ನೀಡಿದ ಮಾಹಿತಿಯಂತೆ ಹಾನಿಗಳ ವಿವರ ಹೀಗಿದೆ.
ಅರಳ ಗ್ರಾಮದ ಗರುಡ ಮಹಾಂಕಾಳಿ ದೇವಸ್ಥಾನದ ಸಭಾಂಗಣದ ಹಿಂಭಾಗದ ಕಂಪೌಂಡ್ ಕುಸಿದಿದೆ. ಅಮ್ಟಾಡಿ ಗ್ರಾಮದ ಮಂಡೆಗುರಿ ಎಂಬಲ್ಲಿ ಜಾನಕಿ ಎಂಬವರ ಮನೆಯ ಮುಂಭಾಗ ಶೀಟ್ ಮೇಲೆ ಕಂಪೌಂಡ್ ಕುಸಿದಿದೆ. ಸಜಿಪಮೂಡ ಗುರುಮಂದಿರ ಬಳಿ ತಡೆಗೋಡೆ ಕುಸಿದು ರವಿ ಎಂಬವರ ಮನೆಗೆ ಬಿದ್ದಿದ್ದು ಹಾನಿಯಾಗಿದೆ. ಕರಿಯಂಗಳ ಗ್ರಾಮದ ರಂಜಿತ್ ಶೆಟ್ಟಿ ಅವರ ನಿರ್ಮಾಣ ಹಂತದ ಮನೆ ಕುಸಿದು ಸಂಪೂರ್ಣ ಹಾನಿಯಾಗಿರುತ್ತದೆ.
ಸರಪಾಡಿ ಗ್ರಾಮದ ಉಜಿರಾಡಿ ಎಂಬಲ್ಲಿ ಐತಪ್ಪ ಪೂಜಾರಿ ಎಂಬುವವರ ವಾಸದ ಮನೆಯ ಬದಿಯಲ್ಲಿರುವ ತಡೆಗೋಡೆಯ ಮಳೆಗೆ ಜರಿದು ಬಿದ್ದಿದೆ. ಕೊಳ್ನಾಡು ಗ್ರಾಮದ ಕಾಡುಮಠ ಎಂಬಲ್ಲಿ ಮೇಲಿನ ಮನೆಯ ಕಾಂಪೌಂಡ್ ಕುಸಿದು ಚಿತ್ರಾವತಿ ಎಂಬುವವರ ವಾಸ್ತವ್ಯದ ಮನೆಗೆ ತೀವ್ರ ಹಾನಿಯಾಗಿರುತ್ತದೆ. ಅದೃಷ್ಟವಶಾತ್ ಮನೆಯ ಸದಸ್ಯರಿಗೆ ಯಾವುದೇ ಪ್ರಾಣ ಹಾನಿಯಾಗಿರುವುದಿಲ್ಲ. ಮನೆಯ ಸದಸ್ಯರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿರುತ್ತದೆ.
ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಬಾಕಿಲ ಎಂಬಲ್ಲಿ ವಾಣಿ ಎಂಬುವರ ಮನೆಯಂಗಳದ ಕಾಂಕ್ರೀಟಿನ ತಡೆಗೋಡೆಯು ಗಾಳಿ ಮಳೆಗೆ ಜರಿದು ಬಿದ್ದಿದ್ದು ಬಾಳೆ ಗಿಡಗಳು ಮುರಿದು ಬಿದ್ದಿರುತ್ತದೆ, ಮನೆಗೆ ಯಾವುದೇ ಹಾನಿಯಾಗಿರುವುದಿಲ್ಲ. ಅರಳ ಗ್ರಾಮದ ಆಲ್ಮುಡೆ ಎಂಬಲ್ಲಿ ಚಂದ್ರಾವತಿ ಎಂಬವರ ಮನೆ ಕಂಪೌಂಡ್ ಕುಸಿದಿದೆ. ಸಜೀಪನಡು ಗ್ರಾಮದ ದೇರಾಜೆ ಬರೆ ಮನೆ ಎಂಬಲ್ಲಿ ಲೀಲಾ ಕೋಂ ಸಂಜೀವ ಪೂಜಾರಿ ಅವರ ಮನೆಯ ಸಮೀಪ ಗುಡ್ಡೆಯ ಮಣ್ಣು ಜರಿದು ಬಿದ್ದಿದ್ದು ಮನೆಗೆ ಯಾವುದೇ ಹಾನಿ ಆಗಿರುವುದಿಲ್ಲ ಬಾಳ್ತಿಲ ಗ್ರಾಮದ ಸುಧೆಕಾರು ಎಂಬಲ್ಲಿ ಸೇಸಪ್ಪ ನಾಯ್ಕ್ ರವರ ಮನೆಯ ಹಿಂಬದಿಯ ಗುಡ್ಡ ಜರಿದು ಬಿದ್ದಿರುತ್ತದೆ ಅರಳ ಗ್ರಾಮದ ಸುಂದರ ಎಂಬವರ ಮನೆ ಮೇಲೆ ಕಂಪೌಂಡ್ ಕುಸಿದಿದೆ. ಕೊಯಿಲ ಗ್ರಾಮದ ಮೋಹನ ಪೂಜಾರಿ ಇವರ ಮನೆಯ ಹಿಂಬದಿಗೆ ಹಾನಿಯಾಗಿರುತ್ತದೆ.
Kshetra Samachara
13/10/2021 04:17 pm