ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿದ ಸೂರ್ಯ ಪುರೋಹಿತ್ ಗೆ ಸನ್ಮಾನ

ಕಾರ್ಕಳ: ಕಾರ್ಕಳ ಶ್ರೀನಿವಾಸ ಸೇವಾ ಟ್ರಸ್ಟ್( ರಿ) ಹಾಗೂ ಸುಮೇಧ ಫ್ಯಾಶನ್ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಯಾಶನ್ ಡಿಸೈನಿಂಗ್ ಇದರ ಆಶ್ರಯದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಕೇವಲ 3 ನಿಮಿಷದಲ್ಲಿ ಸೂರ್ಯೋದಯದ ಚಿತ್ರ ಬಿಡಿಸಿ ಇಂಡಿಯನ್ ಬುಕ್ಸ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿದ ಸೂರ್ಯ ಪುರೋಹಿತ್ ಗೆ ಸನ್ಮಾನ ಕಾರ್ಯಕ್ರಮವು ಕಾರ್ಕಳದ ಎಸ್ ಜೆ ಆರ್ಕೇಡ್ ನ ಸುಮೇಧ ಫ್ಯಾಶನ್ ಇನ್‌ಸ್ಟಿಟ್ಯೂಟ್‌ ಆಫ್‌ ಪ್ಯಾಶನ್ ಡಿಸೈನಿಂಗ್ ಕಾಲೇಜಿನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸನ್ಮಾನ ಸ್ವೀಕರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸೂರ್ಯ ಪುರೋಹಿತ್ ಅವರು, ನಾವು ಇಂದು ಕಷ್ಟಪಟ್ಟರೆ ಮುಂದೆ ಸುಖವಾಗಿರಬಹುದು.ಸಾಧಿಸುವ ಛಲವೊಂದಿದ್ದರೆ ನಮ್ಮ ಜೀವನದಲ್ಲಿ ಖಂಡಿತವಾಗಿಯೂ ಮುಂದೆ ಬರಬಹುದು ಎಂದರು.

ಸಂಸ್ಥೆಯಲ್ಲಿ ಕೋರ್ಸ್ ಮುಗಿಸಿ ತೆರಳುತ್ತಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದ ಮುಖ್ಯಸ್ಥರಾದ ಸಾಧನ ಜಿ ಆಶ್ರಿತ್ ಅವರು ,ನಮ್ಮ ಸಂಸ್ಥೆಯಲ್ಲಿ ಕಲಿತ ಮಕ್ಕಳು ನಮ್ಮನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ. ಸದಾ ನಮ್ಮ ಜೊತೆಯಲ್ಲಿ ಇರುತ್ತಾರೆ .ಅವರು ಬೇರೆ ಕಂಪನಿಗಳಲ್ಲಿ ಕೆಲಸಕ್ಕೆ ಹೋದರೂ ನಾವು ಅವರಬಗ್ಗೆವಿಚಾರಿಸುತ್ತೇವೆ ಮತ್ತು ಅವರ ಸಂಪರ್ಕದಲ್ಲಿರುತ್ತೇವೆ. ವಿದ್ಯಾರ್ಥಿಗಳು ಫ್ಯಾಷನ್ಡಿಸೈನರ್ ಆಗಿ ಹೊಸ ಆಯಾಮ ಕಂಡು ಹಿಡಿಯಬೇಕು ಎಂದರು.

ಈ ಸಮಯದಲ್ಲಿ ಸಂಸ್ಥೆಯ ಉಪನ್ಯಾಸಕಿಯಾದ ಸಹನಾ ನವರು ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ನೀವು ಕಾರ್ಯನಿರ್ವಹಿಸಲು ಹೋಗುತ್ತಿರುವ ಕಂಪನಿಗಳಲ್ಲಿ ಒಳ್ಳೆಯ ಫ್ಯಾಶನ್ ಡಿಸೈನರ್ ಆಗಿ ತಂದೆ-ತಾಯಿ ಮತ್ತು ನಮ್ಮ ಸಂಸ್ಥೆಗೆ ಒಳ್ಳೆಯ ಹೆಸರನ್ನು ತನ್ನಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ವಿದ್ಯಾಭ್ಯಾಸ ಮುಗಿಸಿದ ಪೂಜಾ ,ಅಶ್ವಿನಿ ಮತ್ತು ನಿಧಿಶ್ರೀ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

Edited By : PublicNext Desk
Kshetra Samachara

Kshetra Samachara

09/10/2021 11:31 am

Cinque Terre

11.11 K

Cinque Terre

0

ಸಂಬಂಧಿತ ಸುದ್ದಿ