ಬಜಪೆ:ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಶ್ರೀ ಶ್ರೀ ನಿರಂಜನ ಸ್ವಾಮೀಜಿಯವರ ಕೃಪಾಶ್ರೀವಾದದಿಂದ ಆ. 7 ರಿಂದ ಆ.14 ರ ತನಕ ಜರುಗಲಿದೆ.ಪ್ರತಿ ದಿನ ಮಧ್ಯಾಹ್ನ ಗಂಟೆ 12:30ಕ್ಕೆ ಮಹಾಪೂಜೆ ಸಂಜೆ ಗಂಟೆ 6:00ರಿಂದ 8ರವರೆಗೆ ವಿವಿಧ ಭಜನಾ ಮಂಡಲಿಯವರಿಂದ ಭಜನೆ, ರಾತ್ರಿ 8ಗಂಟೆಗೆ ಮಹಾಪೂಜೆ ನೆರವೇರಲಿರುವುದು.
ಕೋವಿಡ್-19ಕ್ಕೆ ಸಂಬಂಧಪಟ್ಟಂತೆ ಸರಕಾರದ ಸೂಚನಾ ನಿಯಮಗಳನ್ನು ಪಾಲನೆ ಮಾಡುವುದು ಕಡ್ಡಾಯ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ.
Kshetra Samachara
06/10/2021 06:01 pm