ಬಂಟ್ವಾಳ: ಸಮಾಜ ಕಲ್ಯಾಣ ಇಲಾಖೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ ಕೇಂದ್ರ ಸಚಿವ ನಾರಾಯಣಸ್ವಾಮಿ ಹೇಳಿದ್ದಾರೆ.
ಬಂಟ್ವಾಳಬಂಟರ ಭವನದಲ್ಲಿ ಅಂತ್ಯೋದಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರತಿ ಜಿಲ್ಲಾಧಿಕಾರಿ ಜಾಗೃತಿ ಸಮಿತಿಗಳನ್ನು ಕಡ್ಡಾಯವಾಗಿ ರಚನೆ ಮಾಡಬೇಕು, ಅದರಲ್ಲಿ ಒಟ್ಟು ಚರ್ಚೆಗಳು ಆಗಬೇಕು, ಆ ನಂತರ ರಾಜ್ಯ, ಜಿಲ್ಲೆಯಲ್ಲಾದ ಅಭಿವೃದ್ಧಿಯ ಅನುಷ್ಠಾನ ಆಗಬೇಕು ಎಂದು ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಸಮಾಜ ಕಲ್ಯಾಣ ಇಲಾಖೆ ಮಂತ್ರಿಗೆ ಆ ಇಲಾಖೆ ಮಾತ್ರ ನಿರ್ವಹಣೆಯಲ್ಲ. ಮತ್ತೊಂದು ಸಾರಿ ಎಚ್ಚರಿಸುತ್ತಿದ್ದೇನೆ. ಸಮಾಜ ಕಲ್ಯಾಣ ಇಲಾಖೆ ಇಡೀ ಸಮುದಾಯದ ಕಸ್ಟೊಡಿಯನ್. ಸಮಾಜದ ಸಂಕಷ್ಟಗಳನ್ನು ಪರಿಹರಿಸುವ ಜವಾಬ್ದಾರಿ ಕೊಟ್ಟಿದೆ. ಸಮಾಜ ಕಲ್ಯಾಣ ಇಲಾಖೆಗೆ ಎಲ್ಲ ಇಲಾಖೆಯ ಕಾರ್ಯದರ್ಶಿಗಳು ಉತ್ತರದಾಯಿತ್ವ. ಹಣಕಾಸು ಎಲ್ಲಿ ಖರ್ಚಾಯಿತು ಎಂಬುದರ ಲೆಕ್ಕ ಕೊಡಬೇಕು. ಒಂದು ರೂಪಾಯಿಯೂ ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಸಮರ್ಪಣೆಯಾಗಬೇಕು. ತಾನು ಹಿಂದೆ ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ಅಧಿಕಾರಿಗಳು ಕೆಲಸ ಮಾಡದೇ ಇದ್ದಾಗ ಅಧಿಕಾರಿಗಳು ಕೆಲಸ ಮಾಡದಿದ್ದರೆ ಲೆಕ್ಕ ಕೊಡದಿದ್ದರೆ, ಕಟ್ಟುನಿಟ್ಟು ಕ್ರಮ ಕೈಗೊಳ್ಳುತ್ತಿದ್ದೆ ಎಂದು ಜ್ಞಾಪಿಸಿಕೊಂಡರು.
Kshetra Samachara
04/10/2021 06:58 pm