ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಂದಾವರ: ಗ್ರಾ.ಪಂ ಪಿಡಿಓ ವರ್ಗಾವಣೆ ಮಾಡಿ : ಗ್ರಾಮಸ್ಥರ ಆಕ್ರೋಶ

ಬಜಪೆ : ಕಂದಾವರ ಗ್ರಾಮ ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಯಶವಂತ ಬೆಳ್ಚಡ ಅವರು ಗ್ರಾಮ ಸಭೆಗೆ ಗೈರಾಗಿದ್ದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕಂದಾವರಪಂಚಾಯತ್ ನ 2021-22 ನೇ ಸಾಲಿನ ಗ್ರಾಮಸಭೆಯಲ್ಲಿನಡೆದಿದೆ.

ಕಿನ್ನಿಕಂಬಳ ರಾಧಾಕೃಷ್ಣ ಭಜನಾ ಮಂದಿರದಲ್ಲಿ ಪಂಚಾಯತ್ ಅಧ್ಯಕ್ಷ ಉಮೇಶ್ ಮೂಲ್ಯ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆಯು ನಡೆಯಿತು.ಗ್ರಾಮ ಸಭೆಗೆ ಗೈರಾದ ಪಿಡಿಓ ರವರನ್ನು ವರ್ಗಾವಣೆ ಮಾಡುವಂತೆ ಮುಖ್ಯಮಂತ್ರಿಗಳು ಸೇರಿದಂತೆ ಪಂಚಾಯತ್ ರಾಜ್ ಮತ್ತು ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲು ನಿರ್ಣಯಿಸಲಾಗಿದೆ.

ನ್ಯಾಯಾಲಯಕ್ಕೆ ಹಾಜಾರಾಗಲು ಇದ್ದ ಕಾರಣ ಗ್ರಾಮಸಭೆಗೆ ಪಿಡಿಓ ಅವರು ಹಾಜರಾಗುತ್ತಿಲ್ಲ ಎಂದು ನೋಡಲ್ ಅಧಿಕಾರಿ ಶ್ರೀಮತಿ ರಾಜಲಕ್ಷ್ಮಿ ಅವರು ಸಭೆಗೆ ತಿಳಿಸಿದ್ದು, ಆಕ್ರೋಶ ಗೊಂಡ ಗ್ರಾಮಸ್ಥರು ನ್ಯಾಯಾಲಯಕ್ಕೆ ಹಾಜರಾಗಲು ಇರುವ ಬಗ್ಗೆ ಮೊದಲೇ ತಿಳಿದಿದ್ದರೂ ಉದ್ದೇಶ ಪೂರ್ವಕವಾಗಿ ಅದೇ ದಿನ ಗ್ರಾಮ ಸಭೆಯನ್ನು ನಿಗದಿಪಡಿದ ಕಾರಣವೇನು ಎಂದು ಪ್ರಶ್ನಿಸಿದರು. ಪಿಡಿಓ ಅವರ ವಿರುದ್ಧ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸುತ್ತಿಲ್ಲ, ಪಂಚಾಯತ್ ಗೆ ಬರುವ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಆರೋಪಿಸಿ ಅವರನ್ನು ವರ್ಗಾವಣೆ ಮಾಡುವಂತೆ ಒತ್ತಾಯಿಸುವ ನಿರ್ಣಯ ಕೈಗೊಳ್ಳಲಾಯಿತು.

ಪಂಚಾಯತ್ ಉಪಾಧ್ಯಕ್ಷೆ ಚಂದ್ರಿಕಾ, ಪಂ. ಸದಸ್ಯರುಗಳು, ಕೃಷಿ ಸಂಪರ್ಕ ಕೇಂದ್ರದ ಚಿದಂಬರ ಮೂರ್ತಿ, ಗ್ರಾಮಕರಣಿಕರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಭೆಯಲ್ಲಿ ಭಾಗವಹಿಸಿದ್ದರು.ಕಾರ್ಯದರ್ಶಿ ಜಲಜಾಕ್ಷಿ ಸ್ವಾಗತಿಸಿದರು.

Edited By : PublicNext Desk
Kshetra Samachara

Kshetra Samachara

28/09/2021 03:59 pm

Cinque Terre

1.92 K

Cinque Terre

0

ಸಂಬಂಧಿತ ಸುದ್ದಿ