ಬಾರ್ಕೂರು: ಕಡಂದಲೆ ಸುರೇಶ್ ಭಂಡಾರಿ ಫ್ಯಾಮಿಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರಸಾದ್ ನೇತ್ರಾಲಯ, ನವ್ಯ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಇವರ ಸಹಯೋಗದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ, ಉಡುಪಿ ಪ್ರಾಥಮಿಕ ಆರೋಗ್ಯ ಕೇಂದ್ರ, ಬಾರ್ಕೂರು ಇವರ ಸಹಭಾಗಿತ್ವದಲ್ಲಿ ಇಂದು ಬಾರ್ಕೂರಿನ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ನಡೆಯಿತು.ಶಾಸಕ ಕೆ. ರಘುಪತಿ ಭಟ್ ಶಿಬಿರ ಉದ್ಘಾಟಿಸಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಪ್ರಸಾದ್ ನೇತ್ರಾಲಯದ ಡಾll. ಕೃಷ್ಣಪ್ರಸಾದ್, ಸಮಾಜ ಸೇವಕರು ಮತ್ತು ಉದ್ಯಮಿಗಳಾದ ಶಾಂತಾರಾಮ್ ಶೆಟ್ಟಿ ಬಾರ್ಕೂರು, ನಗರಸಭಾ ಸದಸ್ಯರಾದ ಸವಿತಾ ಹರೀಶ್ ರಾಮ್, ಬಾಲಕೃಷ್ಣ ಶೆಟ್ಟಿ, ಉಡುಪಿ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ನಿಂಜೂರು ವಿಶ್ವನಾಥ ಭಂಡಾರಿ, ನ್ಯಾಯವಾದಿಗಳಾದ ಉಮೇಶ್ ಶೆಟ್ಟಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರಾದ ಶಂಭು ಶೆಟ್ಟಿ, ಭಂಡಾರಿ ಮಹಾ ಮಂಡಲ ಬಾರ್ಕೂರು ಅಧ್ಯಕ್ಷರಾದ ಸದಾಶಿವ ಭಂಡಾರಿ ಸಕಲೇಶಪುರ ಮತ್ತು ಸೌರಭ್ ಭಂಡಾರಿ, ಶೋಭಾ ಭಂಡಾರಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
Kshetra Samachara
28/09/2021 12:03 pm