ಬಜಪೆ : ಸಮಾಜದೊಂದಿಗೆ ನಿರಂತರ ಸಂಪರ್ಕ ಹೊಂದಿರುವ ರಿಕ್ಷಾ ಚಾಲಕರಿಗೆ ಕಷ್ಟ ಮತ್ತು ಸಮಸ್ಯೆಗಳಿಗೆ ಸ್ಪಂದಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಹೇಳಿದರು.ಅವರು ಇಂದು
ಗಂಜಿಮಠದಲ್ಲಿ ಅಣ್ಣಾ ಹಜಾರೆ ಆಟೋ ಪಾರ್ಕ್‍ನ ನೂತನ ಆಟೋ ತಂಗುದಾಣ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಚಂದ್ರಹಾಸ ಶೆಟ್ಟಿ ನಾರಳ ವಹಿಸಿದ್ದರು.ಈ ಸಂದರ್ಭ ಗಂಜಿಮಠ ಪಂಚಾಯತ್ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಗುರುಪುರ ಬಿಜೆಪಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಸೋಹನ್ ಅತಿಕಾರಿ, ಪಂಚಾಯತ್ ಸದಸ್ಯ ಸುನಿಲ್ ಫೆರ್ನಾಂಡಿಸ್, ತಾಪಂ ಮಾಜಿ ಸದಸ್ಯ ಸುನಿಲ್, ಹಾಜಿ ನೌಶಾದ್, ಉದ್ಯಮಿ ಸತೀಶ್ ಗಂಜಿಮಠ, ಬಿ ಜೆ ಪಿಂಟೊ, ರಿಕ್ಷಾ ಪಾರ್ರ್ಕ ಅಧ್ಯಕ್ಷ ಸಿದ್ಧಿಕಿ, ಲೋಕನಾಥ, ಪಕ್ಷ ಕಾರ್ಯಕರ್ತರು, ರಿಕ್ಷಾ ಚಾಲಕ-ಮಾಲಕರು ಹಾಗೂ ಇತತರು ಉಪಸ್ಥಿತರಿದ್ದರು.
Kshetra Samachara
26/09/2021 09:15 pm