ಬಜಪೆ:ಪಂಚಾಯತ್ ವತಿಯಿಂದ ತ್ರಾಜ್ಯ ವಿಲೇವಾರಿ ಅತಿ ಮಹತ್ವದ ಕಾರ್ಯವಾಗಿದ್ದು,ಮನೆಯ ತ್ರಾಜ್ಯದಿಂದ ಗೊಬ್ಬರ ಉತ್ಪಾದಿಸುವತ್ತ ಗ್ರಾಮಸ್ಥರು ಹೆಚ್ಚಿನ ಕಾರ್ಯಪ್ರವೃತ್ತರಾಗುದರಿಂದ ತ್ರಾಜ್ಯ ಸಮಸ್ಯೆಗೆ ಕೊಂಚ ಪರಿಹಾರ ಕಂಡು ಕೊಳ್ಳಲು ಸಾಧ್ಯ ಎಂದು ಪಂ.ಪಿಡಿಓ ಯಶವಂತ ಬೆಳ್ಚಡ ಅವರು ಹೇಳಿದರು.ಅವರು ಕಂದಾವರ ,ಅದ್ಯಪಾಡಿ ಮತ್ತು ಕೊಳಂಬೆ ಗ್ರಾಮಗಳನ್ನೊಳಗೊಂಡ ಕಂದಾವರ ಪಂಚಾಯತ್ ನಲ್ಲಿ ನಡೆದ ವಾರ್ಡ್ ಸಭೆಯಲ್ಲಿ ಹೇಳಿದರು. ಸರಕಾರದ ಯೋಜನೆಗಳ ಬಗ್ಗೆ ಗ್ರಾಮಸ್ಥರು ಹೆಚ್ಚಿನ ಪ್ರಯೋಜನವನ್ನು ಪಡೆಯಬೇಕು ಎಂದರು.
ವಾರ್ಡ್ ಸಭೆಯ ಅಧ್ಯಕ್ಷತೆಯನ್ನು ಕಂದಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಉಮೇಶ್ ಮೂಲ್ಯ ವಹಿಸಿದ್ದರು.ಸಭೆಯಲ್ಲಿ ವಿದ್ಯುತ್ ಸಂಪರ್ಕ ರಹಿತರ ಮನೆಗಳ ಮಾಹಿತಿಗಳ ಬಗ್ಗೆ ಚರ್ಚೆ ,ಬೈಲು ಮಾಗಣೆ ಮೂಡುಕರೆಯ ತುರ್ಲು ಗುಡ್ಡೆಯಲ್ಲಿರುವ ನಾಗಬ್ರಹ್ಮ ರಕ್ತೇಶ್ವರೀ ಪರಿವಾರ ಶಕ್ತಿಗಳ ಸಾನಿಧ್ಯದ ಸಮೀಪ ಜಿಲ್ಲಾಡಳಿತದಿಂದ ನೆಡುತೋಪು ಹಾಗೂ ನಿವೇಶನ ರಹಿತರಿಗೆ ನಿವೇಶನ ನೀಡಲು ಮುಂದಾಗಿದ್ದು,ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಗಿದೆ.
ಈ ಹಿಂದೆ ಕೂಡ ದೇವಸ್ಥಾನದ ಸಮೀಪ ಜಿಲ್ಲಾಡಳಿತದಿಂದ ತ್ರಾಜ್ಯ ವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿದ್ದರೂ ರದ್ದಾಗಿತ್ತು.ಈ ಬಗ್ಗೆ ಪಂಚಾಯತ್ ಪಿಡಿಓ ಯಶವಂತ ಬೆಳ್ಚಡರು ಕಾನೂನಾತ್ಮಕ ಸಲಹೆಯನ್ನು ನೀಡಿದರು.ಈ ಸಂದರ್ಭ ಪಂಚಾಯತ್ ಉಪಾಧ್ಯಕ್ಷೆ ಚಂದ್ರಿಕಾ,ಕಾರ್ಯದರ್ಶಿಜಲಜಾಕ್ಷಿ ಪಿ.ಎಸ್ ಹಾಗೂ ಕಂದಾವರ ವಾರ್ಡ್ ಸದಸ್ಯರು ಉಪಸ್ಥಿತರಿದ್ದರು.ಪಂಚಾಯತ್ ಪಿಡಿಓ ಯಶವಂತ ಬೆಳ್ಚಡ ಅವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
18/09/2021 03:44 pm