ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ ತಾಲೂಕಿನಲ್ಲಿ ಕೋವಿಡ್ ಇಳಿಮುಖ, ಲಸಿಕೆಗೆ ವೇಗ

ಬಂಟ್ವಾಳ: ಕಳೆದ ಮೂರು ವಾರಗಳಿಂದ ಬಂಟ್ವಾಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದರೆ, ಲಸಿಕಾ ಪ್ರಕ್ರಿಯೆಗಳಿಗೆ ವೇಗ ದೊರಕುತ್ತಿದೆ. ಬಂಟ್ವಾಳ ತಾಲೂಕಿನಲ್ಲಿ ಪಾಸಿಟಿವಿಟಿ ದರ ಗುರುವಾರ ಶೇ.0.8 ಇತ್ತು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ತಿಳಿಸಿದ್ದಾರೆ.

ತಾಲೂಕಿನಲ್ಲಿ ಗುರುವಾರ 157 ಸಕ್ರಿಯ ಪ್ರಕರಣಗಳಿದ್ದು, 127 ಮಂದಿ ಹೋಂ ಐಸೋಲೇಶನ್ ನಲ್ಲಿದ್ದಾರೆ. 35 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ 7 ಮಂದಿಯಷ್ಟೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೊನಾ ಪ್ರಕರಣಗಳು ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ (14) ಮಂಚಿ (18), ಮಾಣಿ (13), ಪುಂಜಾಲಕಟ್ಟೆ (20), ವಿಟ್ಲ (13)ಗಳಲ್ಲಿ ಜಾಸ್ತಿ ಇವೆ. ಪೆರುವಾಯಿ, ಬಾಳ್ತಿಲ ಗ್ರಾಮಗಳಲ್ಲಿ ತಲಾ 2 ಪ್ರಕರಣಗಳಿದ್ದರೂ ಕಳೆದ ಮೂರು ವಾರಗಳಿಗೆ ಹೋಲಿಸಿದರೆ ಕಡಿಮೆ. ಇನ್ನು ಲಸಿಕಾ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಂಟ್ವಾಳದಲ್ಲಿ 60ವರ್ಷಕ್ಕೆ ಮೇಲ್ಪಟ್ಟು ವಯಸ್ಸಿನವರಿಗೆ ಶೇ.100 ಲಸಿಕೆ ಹಾಕಿದ ಸಾಧನೆ ಬಂಟ್ವಾಳದ್ದು. 40ರಿಂದ 59 ಶೇ.98 ಹಾಗೂ 18 ರಿಂದ 44 ಶೇ. 58 ಸಾಧನೆ ಆಗಿದೆ. ಶುಕ್ರವಾರ ನಡೆಯುವ ಮೆಗಾ ಲಸಿಕಾ ಅಭಿಯಾನದಲ್ಲಿ 138 ಕೇಂದ್ರಗಳಲ್ಲಿ 20880 ಡೋಸ್ ಲಸಿಕೆಗಳನ್ನು ವಿತರಿಸಲಾಗುತ್ತದೆ.

Edited By : PublicNext Desk
Kshetra Samachara

Kshetra Samachara

16/09/2021 07:11 pm

Cinque Terre

4.83 K

Cinque Terre

0

ಸಂಬಂಧಿತ ಸುದ್ದಿ