ಬಜಪೆ : ಚುನಾವಣೆ ಬರುದಕ್ಕಿಂತ ಮುಂಚೆ ಕಾಂಗ್ರೆಸ್ ಸ್ಥಳೀಯ ಮಟ್ಟದಲ್ಲಿ ಸದೃಢವಾಗಬೇಕು ಮತ್ತು ಭಿನ್ನಮತಕ್ಕೆ ಎಳ್ಳಷ್ಟೂ ಆಸ್ಪದ ನೀಡಬಾರದು ಎಂದು ಗುರುಪುರ ಬ್ಲಾಕ್ ಕಾಂಗ್ರೆಸ್ ವೀಕ್ಷಕರಾಗಿರುವ ಕಾರ್ಪೊರೇಟರ್ ಅನಿಲ್ ಕುಮಾರ್ ತಿಳಿಸಿದರು.ಅವರು
ಗುರುಪುರ ಕೈಕಂಬದಲ್ಲಿರುವ ಗುರುಪುರ ಕಾಂಗ್ರೆಸ್ ಬ್ಲಾಕ್ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಅವರು ಕಂದಾವರ, ಗಂಜಿಮಠ, ಅಡ್ಡೂರು ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ಈಸಂದರ್ಭದಲ್ಲಿ ಮಾಜಿ ಶಾಸಕ ಮೊೈದಿನ್ ಬಾವಾ ,ಪಕ್ಷದ ಜಿಲ್ಲಾ ವಕ್ತಾರ ಗಣೇಶ್ ಪೂಜಾರಿ, ಗುರುಪುರ ಕಾಂಗ್ರೆಸ್ ವಲಯಾಧ್ಯಕ್ಷ ಪುರುಷೋತ್ತಮ ಮಲ್ಲಿ, ಕಾಂಗ್ರೆಸ್ ಕಿಶಾನ್ ಘಟಕದ ಅಧ್ಯಕ್ಷ ವಿನಯ ಕುಮಾರ್ ಶೆಟ್ಟಿ, ಗುರುಪುರ ಪಂಚಾಯತ್ ಅಧ್ಯಕ್ಷ ಯಶವಂತ ಶೆಟ್ಟಿ, ಪಂಚಾಯತ್ ಸದಸ್ಯರು, ತಾಪಂ ಮಾಜಿ ಸದಸ್ಯ ಸುನಿಲ್ ಕುಮಾರ್, ಹಿಂದುಳಿದ ವರ್ಗಗಳ ಘಟಕಾಧ್ಯಕ್ಷ ಕೀರ್ತಿರಾಜ್, ಕಾರ್ಮಿಕ ಘಟಕದ ಕೃಷ್ಣ ಬಂಗೇರ ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು.
Kshetra Samachara
08/09/2021 05:53 pm