ಬಜಪೆ :ಸಮಾಜದ ರಕ್ಷಣೆಯತ್ತ ಪೊಲೀಸರು ದಿನದ 24 ಗಂಟೆ ದುಡಿಯುತ್ತಿದ್ದು ಪೊಲೀಸರ ಜತೆಗೆ ಸಾರ್ವಜನಿಕರು ಸಹಕಾರ ನೀಡಬೇಕು. ಸಾರ್ವಜನಿಕರು ಸಹಕಾರ ನೀಡಿದರೆ ಮೈಸೂರಿನಲ್ಲಿ ನಡೆದ ಘಟನೆಗಳನ್ನು ತಡೆಯಲು ಸಾಧ್ಯ ಎಂದು ಮಂಗಳೂರು ನಗರ ಡಿಸಿಪಿ (ಕ್ರೈಮ್) ದಿನೇಶ್ ಕುಮಾರ್ ಹೇಳಿದರು. ಅವರು ಕೈಕಂಬ ಸಮೀಪದ ಮಳಲಿಯ ಮಟ್ಟಿ ಕಾಳಬೈರವ ಮಂಜುನಾಥೇಶ್ವರ ದೇವಸ್ಥಾನ ಮತ್ತು ಗ್ರಾಮಸ್ಥರ ಸಹಕಾರದಲ್ಲಿ ನಡೆದ ಮಹಿಳಾ ಸುರಕ್ಷತಾ ಕಾರ್ಯಾಗಾರದಲ್ಲಿ ಮಾತನಾಡಿದರು.
ಸಾರ್ವಜನಿಕರು ಅಪರಾಧ ಕೃತ್ಯಗಳ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲದೆ ಠಾಣೆಗೆ ಬಂದು ದೂರು ನೀಡಬೇಕು ಅದರಲ್ಲೂ ಮಹಿಳೆಯರು ತಮಗಾಗುವ ದೌರ್ಜನ್ಯವನ್ನು ಸಹಿಸಿಕೊಂಡು ಸುಮ್ಮನಾಗದೆ ಪೊಲೀಸರಿಗೆ ದೂರು ನೀಡಿದರೆ ಇಂತಹ ಘಟನೆಗಳು ಪುನರಾವರ್ತನೆಯಾಗುವುದನ್ನು ತಡೆಗಟ್ಟಬಹುದು.
ತುರ್ತು ಸನ್ನಿವೇಶಗಳಲ್ಲಿ 122 ಸಂಖ್ಯೆಗೆ ಕರೆಮಾಡಿದರೆ ಪೊಲೀಸರು ತಕ್ಷಣ ನಿಮ್ಮ ರಕ್ಷಣೆ ಧಾವಿಸುತ್ತಾರೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಬಜಪೆ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸಂದೇಶ್ ಪಿಜಿ, ಎಸಿಪಿ ಮಹೇಶ್ ಕುಮಾರ್, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಪರ್ಕ್ ಪ್ರಮುಖ್ ಹರೀಶ್ ಮಟ್ಟಿ, ಬಜಪೆ ಠಾಣೆಯ ಉಪನಿರೀಕ್ಷಕ ಪೂವಪ್ಪ ಎಚ್ಎಂ,ಮುಖಂಡರುಗಳು.ಮಹಿಳೆಯರು ಉಪಸ್ಥಿತರಿದ್ದರು.
Kshetra Samachara
01/09/2021 07:22 pm