ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆ.ಪಿ.ನಂಜುಂಡಿಯವರಿಗೆ ಸಚಿವ ಸ್ಥಾನ ನೀಡಿ-ಪತ್ರಿಕಾ ಗೋಷ್ಠಿಯಲ್ಲಿ ನೇರಂಬಳ್ಳಿ ರಮೇಶ್ ಆಚಾರ್ಯ ಒತ್ತಾಯ

ಉಡುಪಿ :ರಾಜ್ಯದಲ್ಲಿ ವಿಶ್ವಕರ್ಮ ಸಮಾಜವನ್ನು ಬಲಿಷ್ಠವಾಗಿ ಕಟ್ಟಿ ಸಮಾಜ ಪ್ರಶ್ನಾತೀತ ನಾಯಕರಾದ, ಹಿಂದುಳಿದ ವರ್ಗಗಳ ನಾಯಕರೂ ಆಗಿರುವ ಮಾನ್ಯ ಕೆ.ಪಿ.ನಂಜುಂಡಿಯವರಿಗೆ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸುತ್ತೇವೆ.

ವಿಶ್ವಕರ್ಮ ಸಮಾಜಕ್ಕೆ ರಾಜಕೀಯ ಶಕ್ತಿಯನ್ನೂ ನೀಡುತ್ತಿಲ್ಲ. ರಾಜ್ಯದ ಬಿಜೆಪಿ ಸರಕಾರದ ಮೇಲೆ ಭರವಸೆ ಇರಿಸಿಕೊಂಡಿದ್ದೇವು, ಆದರೆ ನಮಗೆ ಯಾವೂದೇ ವ್ಯವಸ್ಥೆಯನ್ನು ಮಾಡಿಕೊಡುತ್ತಿಲ್ಲ. ಇನ್ನಾದರೂ ಶೀಘ್ರವಾಗಿ ವಿಶ್ವಕರ್ಮರಿಗೆ ನ್ಯಾಯ ನೀಡುವ ಮೂಲಕ ನಮ್ಮ ನಾಯಕರಾದ ಕೆ.ಪಿ.ನಂಜುಂಡಿಯವರಿಗೆ ರಾಜಕೀಯ ಶಕ್ತಿ ನೀಡಬೇಕಾಗಿ ತಮ್ನನ್ನು ಒತ್ತಾಯಿಸುತ್ತೇವೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾ ಸಭಾ ದ ಉಡುಪಿ ಜಿಲ್ಲಾಧ್ಯಕ್ಷ ನೆರಂಬಳ್ಳಿ ರಮೇಶ ಆಚಾರ್ಯ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದರು.

ಅವರು ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.ಮುಂದೆ ನಮ್ಮ ನಾಯಕರಿಗೆ ರಾಜಕೀಯದ ಶಕ್ತಿಯ ಜೊತೆಗೆ ಸರ್ಕಾರದ ವಿವಿಧ ಸವಲತ್ತು ನೀಡದಿದ್ದರೆ ನಮ್ಮ ನಾಯಕರೊಂದಿಗೆ ನಾವೆಲ್ಲ ಚಚಿðಸಿ ಮುಂದಿನ ತೀರ್ಮಾನವನ್ನು ನಾವು ತೆಗೆದುಕೊಳ್ಳುತ್ತೇವೆ ಎಂದರು.

ಸುದ್ದಿ ಗೋಷ್ಠಿಯಲ್ಲಿ ರಾಮಕೃಷ್ಣ ಆಚಾರ್ಯ ಕೋಟ.ಅಧ್ಯಕ್ಷರು. ಯುವ ಘಟಕ. ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಉಡುಪಿ ಜಿಲ್ಲೆ,ವಿಶ್ವಕರ್ಮ ಸಮಾಜದ ಮುಖಂಡರಾದ ನಾರಾಯಣ ಆಚಾರ್ಯ ಬೈಂದೂರು, ಗಂಗಾಧರ ಆಚಾರ್ಯ ಬಾರ್ಕೂರು, ನಾಗರಾಜ್ ಆಚಾರ್ಯ ಬೈಂದೂರು, ಮಹೇಶ್ ಆಚಾರ್ಯ ಬೈಂದೂರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

30/08/2021 03:21 pm

Cinque Terre

5.42 K

Cinque Terre

1

ಸಂಬಂಧಿತ ಸುದ್ದಿ