ಬಂಟ್ವಾಳ: ಚಿಣ್ಣರ ಲೋಕ ಸೇವಾಬಂಧು ಬಂಟ್ವಾಳ, ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾಟ್ರಸ್ಟ್ ಬಂಟ್ವಾಳ ಇದರ ಆಶ್ರಯದಲ್ಲಿ ವನ ಮಹೋತ್ಸವ ಕಾರ್ಯಕ್ರಮ ಗುರುವಾರ ಬಿ.ಸಿ.ರೋಡ್ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ ಅವರು ಸಸಿ ನೆಡುವುದರ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿದರು. ಹಾಗೂ ಬಳಿಕ ನಡೆದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಬಂಟ್ವಾಳ ಲೊರೆಟ್ಟೊಹಿಲ್ಸ್ ರೋಟರಿ ಕ್ಲಬ್ ಅಧ್ಯಕ್ಷ ರಾಘವೇಂದ್ರಭಟ್ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ,ಪರಿಸರವನ್ನು ಸಂರಕ್ಷಿಸುವ ಕಾರ್ಯಪ್ರತಿಯೊಬ್ಬನ ಕರ್ತವ್ಯವಾಗಿದೆ. ಕೊರೊನಾ ಮಹಾಮಾರಿಯಿಂದ ಆಮ್ಲಜನಕದ ಕೊರತೆಯಿಂದ ಕಂಗೆಡುವಂತಾಗಿದ್ದು, ಪ್ರಕೃತಿ ನೀಡುವ ಆಮ್ಲಜನಕದ ಮಹತ್ವ ಅರಿಯಬೇಕಾಗಿದೆ ಎಂದರು.
ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾಟ್ರಸ್ಟ್ ಅಧ್ಯಕ್ಷ ಸುದರ್ಶನ್ ಜೈನ್ ಅವರು ಮಾತನಾಡಿ, ಪ್ರಾಕೃತಿಕ ವ್ಯವಸ್ಥೆ ಸುಸ್ಥಿಯಲ್ಲಿದ್ದಾಗ ಮಾನವ ಜೀವನವೂ ಉತ್ತಮವಾಗಿರುತ್ತದೆ ಎಂದ ಅವರು, ಇಂದು ನೆಟ್ಟ ಗಿಡಗಳಿಗೆ ಚಿಣ್ಣರಲೋಕದ ಮಕ್ಕಳ ಹೆಸರಿಡುವ ಮೂಲಕ ಅವರ ಬೆಳವಣಿಗೆಯಂತೆ ಗಿಡಗಳ ಬೆಳವಣಿಗೆಯಾಗುವಂತೆ ಪಾಲನೆ ಮಾಡಲಾಗುವುದು ಎಂದರು.
ಸೇವಾಟ್ರಸ್ಟ್ ಗೌರವಾಧ್ಯಕ್ಷ ಜಯರಾಮ ರೈ, ಗೌರವ ಸಲಹೆಗಾರ ಮಂಜು ವಿಟ್ಲ, ನಿರ್ದೇಶಕರಾದ ಸರಪಾಡಿ ಅಶೋಕ ಶೆಟ್ಟಿ,ಪದ್ಮನಾಭ ಮಯ್ಯ ಉಪಸ್ಥಿತರಿದ್ದರು.
ಸಂಚಾಲಕ ರಾಮಚಂದ್ರ ಶೆಟ್ಟಿಗಾರ್ ಸ್ವಾಗತಿಸಿದರು. ಸೇವಾ ಬಂಧು ಅಧ್ಯಕ್ಷ ಮೊಹನದಾಸ್ ಕೊಟ್ಟಾರಿ ಪ್ರಸ್ತಾವಿಸಿದರು. ಇಬ್ರಾಹಿಂ ಕೈಲಾರ್ ವಂದಿಸಿದರು. ಶೈಲಜಾ ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.
Kshetra Samachara
19/08/2021 03:14 pm