ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ಉಡುಪಿ ಮನೆ ನಿವೇಶನ ಸಂತ್ರಸ್ತರಿಂದ `ನಮ್ಮ ನಡೆ ಬೆಣಗಲ್ ಕಡೆಗೆ’ ಪಾದಯಾತ್ರೆ

ಉಡುಪಿ: ನಾಳೆ ಸ್ವಾತಂತ್ರ್ಯೋತ್ಸವದ ದಿನದಂದು ಉಡುಪಿ ಮನೆ ನಿವೇಶನ ಹಗರಣದ ಸಂತ್ರಸ್ತರು, `ನಮ್ಮ ನಡೆ ಬೆಣಗಲ್ ಕಡೆಗೆ’ ಎಂಬ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ. ನಾಳೆ ಬೆಳಿಗ್ಗೆ 7 ಗಂಟೆಗೆ ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯ ಎದುರಿಗೆ ರಾಷ್ಟ್ರಧ್ವಜವನ್ನು ಅರಳಿಸಿ ಬೆಣಗಲ್ಲಿನ ಸಾರಸ್ವತ ನಡಿಗೆ ಪಾದಯಾತ್ರೆ ಹೊರಡಲಿದ್ದೇವೆ. ಜಿಲ್ಲಾಧಿಕಾರಿಯವರ ಕಚೇರಿಯಿಂದ ಆರಂಭಗೊಳ್ಳುವ ಪಾದಯಾತ್ರೆ 28 ಕಿ.ಮೀ ದೂರದಲ್ಲಿರುವ ಬೆಣಗಲ್ ಗ್ರಾಮದಲ್ಲಿ ಸಮಾಪನಗೊಳ್ಳುತ್ತದೆ.

ಇದು ಯಾರದೇ ವಿರುದ್ಧ ಅಥವಾ ಯಾವುದೋ ಬೇಡಿಕೆಗಾಗಿ ನಡೆಸುವ ಚಳುವಳಿಯ ಭಾಗ ಅಲ್ಲ. ಇದರಲ್ಲಿ ಯಾವುದೇ ರಾಜಕೀಯ ರಾಜಕೀಯ ಪಕ್ಷಗಳಾಗಲೀ, ಸಂಘಟನೆಗಳಾಗಲೀ ಪಾಲ್ಗೊಳ್ಳುತ್ತಿಲ್ಲ. ನಾವು ಯಾವುದೇ ಘೋಷಣೆಗಳನ್ನು ಕೂಗುವುದಾಗಲೀ ಮಾಡುವುದಿಲ್ಲ. ಇದು ಆತ್ಮಾವಲೋಕನದ ಪಾದಯಾತ್ರೆ. ನಮ್ಮ ಪಾದಯಾತ್ರೆ ಯಶಸ್ವಿಯಾಗಲು ಎಲ್ಲ ನಾಗರೀಕರು ಸಹಕರಿಸಬೇಕು ಎಂದು ಉಡುಪಿ ಮನೆ ನಿವೇಶನ ಸಂತ್ರಸ್ತರ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Edited By : PublicNext Desk
Kshetra Samachara

Kshetra Samachara

14/08/2021 03:30 pm

Cinque Terre

3.65 K

Cinque Terre

0

ಸಂಬಂಧಿತ ಸುದ್ದಿ