ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಕ್ಕಳ ಸಂಖ್ಯೆ ವೃದ್ಧಿ, ಕುದ್ರೆಬೆಟ್ಟು ಸರ್ಕಾರಿ ಕನ್ನಡ ಶಾಲೆಗೆ ಬೇಕು ಹೆಚ್ಚುವರಿ ಕೊಠಡಿ

ಆಂಗ್ಲ ಮಾಧ್ಯಮವನ್ನು ಕಲಿಸುವ ಮೂಲಕ ಸರ್ಕಾರಿ ಶಾಲೆಗಳು ಪರಿವರ್ತನೆ ಹೊಂದುತ್ತಿರುವ ಈ ಸನ್ನಿವೇಶದಲ್ಲಿ ಬಂಟ್ವಾಳ ತಾಲೂಕಿನ ಕನ್ನಡ ಮಾಧ್ಯಮವನ್ನೇ ಕಲಿಸುವ ಸರ್ಕಾರಿ ಶಾಲೆಯಲ್ಲಿಯೂ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 8 ವರ್ಷಗಳ ಹಿಂದೆ 19 ಮಕ್ಕಳಿದ್ದ ರಾಷ್ಟ್ರೀಯ ಹೆದ್ದಾರಿ ಸಮೀಪದ ಕಲ್ಲಡ್ಕ ಸಮೀಪ ಕುದ್ರೆಬೆಟ್ಟು ಎಂಬಲ್ಲಿರುವ ಸರ್ಕಾರಿ ಶಾಲೆಯಲ್ಲಿ ಈ ವರ್ಷ ಸೇರ್ಪಡೆಯಾದ ಹದಿಮೂರು ವಿದ್ಯಾರ್ಥಿಗಳ ಜೊತೆಗೆ 73 ಮಕ್ಕಳು.

ಎಲ್ಲ ಶಾಲೆಗಳಂತೆಯೇ ಕುದ್ರಬೆಟ್ಟು ಶಾಲೆಯೂ ಇದೆ. ಆದರೆ ಆಸಕ್ತಿದಾಯಕ ಅಂಶವೇನೆಂದರೆ, ಇಲ್ಲಿರುವ ಮೂರು ಪುಟ್ಟ ಕೊಠಡಿಗಳಲ್ಲೇ ಶಾಲೆಯಲ್ಲಿರುವ ಇಬ್ಬರು ಅಧ್ಯಾಪಕಿಯರು ಮಕ್ಕಳಿಗೆ ವಿಶೇಷವಾದ ತರಬೇತಿಯನ್ನು ನೀಡುತ್ತಾರೆ. ಶಾಲಾಭಿವೃದ್ಧಿ ಸಮಿತಿ ಹಾಗೂ ಊರವರ ನೆರವಿನಿಂದ ಹೆಚ್ಚುವರಿ ಅಧ್ಯಾಪಕಿಯನ್ನು ನೇಮಿಸಲಾಗಿದೆ. ನಲಿಕಲಿಯನ್ನು ಮತ್ತಷ್ಟು ಅರ್ಥಪೂರ್ಣವಾಗಿಸಲು ಇಲ್ಲಿನ ಕೊಠಡಿಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಬಣ್ಣಬಣ್ಣದ ಚಿತ್ರಗಳ ಜೊತೆಗೆ ಸಲಕರಣೆಗಳನ್ನೂ ತರಿಸಲಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಈಗ ಮಕ್ಕಳು ಮನೆಯಲ್ಲೇ ಇದ್ದರೂ ಶಾಲೆ ಆರಂಭವಾದೊಡನೆ ಸಂತಸದಿಂದ ತೊಡಗಿಸಿಕೊಳ್ಳಲು ಜೊತೆಗೆ ಕಾರ್ಯಾನುಭವ ಪಡೆಯಲು ಕೈತೋಟವನ್ನು ಮಾಡಲಾಗಿದ್ದು, ಗಿಡಗಳನ್ನು ನೆಡಲಾಗಿದೆ. ಆದರೆ ಶಾಲೆಯಲ್ಲೀಗ ಮೂರು ತರಗತಿಗಳಷ್ಟೇ ಇವೆ

ಮಕ್ಕಳಿಗೆ ಗ್ರೀನ್ ಬೋರ್ಡ್ ಸಹಿತ ವಿಶೇಷ ಮುತುವರ್ಜಿಯಿಂದ ಶಿಕ್ಷಣವನ್ನು ನೀಡಲಾಗುತ್ತಿರುವ

ಶಾಲೆಯಲ್ಲಿ ಲಾಕ್ ಡೌನ್ ಇರುವ ಕಾರಣ ಮಕ್ಕಳ ಕಲರವ ಇಲ್ಲ. ಆದರೆ ಏಳನೇ ತರಗತಿವರೆಗೆ ವಿಸ್ತಾರವಾಗಿರುವ ಹಾಗೂ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿರುವ ಈ ಶಾಲೆಗೆ ಹೆಚ್ಚುವರಿ ಕೊಠಡಿಗಳು ಅಗತ್ಯವಿದೆ.

Edited By : PublicNext Desk
Kshetra Samachara

Kshetra Samachara

07/08/2021 04:07 pm

Cinque Terre

8.73 K

Cinque Terre

2

ಸಂಬಂಧಿತ ಸುದ್ದಿ